ಚಿಕ್ಕಮಗಳೂರು: ವಾಹನ ಅಡ್ಡಗಟ್ಟಿ ಮೊಬೈಲ್, ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಪಿಕಪ್ ವಾಹನವೊಂದರಲ್ಲಿ ತೀರ್ಥಹಳ್ಳಿಯಿಂದ ರಾತ್ರಿ ಎನ್. ಆರ್. ಪುರಕ್ಕೆ ಬಂದು ಕೋಳಿಗಳನ್ನು ಮಾರಾಟ ಮಾಡಿ ವಾಪಾಸ್ಸಗುವಾಗ ಶಿವಮೊಗ್ಗ ಮುಖ್ಯ ರಸ್ತೆಯಲ್ಲಿನ ಆರಂಭಳ್ಳಿ ಬಸ್ ನಿಲ್ದಾಣದ ಬಳಿ 8-10 ಜನ ಆರೋಪಿಗಳು ವಾಹನವನ್ನು ಅಡ್ಡಗಟ್ಟಿದ್ದಾರೆ. ಕಬ್ಬಿಣದ ರಾಡ್ ನಿಂದ ಮತ್ತು ಕೈನಿಂದ ಪಿಕಪ್ ವಾಹನದ ಚಾಲಕ ಮತ್ತು ಹೆಲ್ಪರ್ ಗೆ ಹಲ್ಲೆ ಮಾಡಿ ಹಣ ಹಾಗೂ ಬೆಳ್ಳಿ ದೋಚಿ ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ಸತ್ಯಾನಂದ (26), ಸಯ್ಯದ್ ಲತೀಫ್ (25) ಬಂಧಿಸಿ, ದೋಚಿದ್ದ ಒಂದು ಬೆಳ್ಳಿಯ ಬ್ರಾಸ್ ಲೈಟ್, ಒಂದು ಬೆಳ್ಳಿಯ ಸರ, 2 ಮೊಬೈಲ್ ಒಂದು ಸೌಂಡ್ ಸಿಸ್ಟಂ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 1 ಹೊಂಡಾಸಿಟಿ ಕಾರು ಮತ್ತು ಕೃತ್ಯಕ್ಕೆ ಬಳಸಿದ ಒಂದು ಲಾಂಗ್, ಒಂದು ಕಬ್ಬಿಣದ ರಾಡ್ ಸೇರಿದಂತೆ 2.55.000/- ರೂ ಮೌಲ್ಯದ ವಸ್ತು ವಶಕ್ಕೆ ಪಡೆದಿದ್ದಾರೆ.