Tuesday, February 10, 2026
Homeಕ್ರೈಮ್ಎನ್ ಆರ್ ಪುರ: ಬಜರಂಗದಳ ಕಾರ್ಯಕರ್ತರ ಸಹಕಾರದಿಂದ ಗೋಕಳ್ಳತನ ತಡೆಗಾಗಿ ಗೋವುಗಳಿಗೆ ರೇಡಿಯಂ ಬೆಲ್ಟ್ ಅಳವಡಿಸಿದ...

ಎನ್ ಆರ್ ಪುರ: ಬಜರಂಗದಳ ಕಾರ್ಯಕರ್ತರ ಸಹಕಾರದಿಂದ ಗೋಕಳ್ಳತನ ತಡೆಗಾಗಿ ಗೋವುಗಳಿಗೆ ರೇಡಿಯಂ ಬೆಲ್ಟ್ ಅಳವಡಿಸಿದ ಬಿಜೆಪಿ ಯುವ ಮೋರ್ಚಾ!

ಎನ್ ಆರ್ ಪುರ: ರಾತ್ರಿ ಸಮಯದಲ್ಲಿ ಗೋವುಗಳು ಕಾಣದೆ ವಾಹನಗಳು ಗುದ್ದಿ ಅಪಘಾತವಾಗುತ್ತಿರುವ ಹಿನ್ನೆಲೆಯಲ್ಲಿ, ಶೃಂಗೇರಿ ಕ್ಷೇತ್ರದ ಮಾಜಿ ಶಾಸಕರಾದ ಡಿ.ಎನ್.ಜೀವರಾಜ್ ಅವರ ಹಾಗೂ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸೂಚನೆಯಂತೆ, ಸೋಮವಾರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಪ್ರೀತಮ್ ಗೌಡ ಅವರ ನೇತೃತ್ವದಲ್ಲಿ, ಭಜರಂಗದಳ ಕಾರ್ಯಕರ್ತರೊಂದಿಗೆ ಸೇರಿ ವಾಹನ ಸವಾರರು ಮತ್ತು ಗೋವುಗಳ ಸುರಕ್ಷತೆಗಾಗಿ ರೆಡಿಯಂ ಬೆಲ್ಟ್ ಅಳವಡಿಸುವ ಕಾರ್ಯದ ಮೊದಲ ಹಂತವನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು.

ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪ್ರೀತಮ್ ಗೌಡ ಮಾತನಾಡಿ ಎನ್ ಆರ್ ಪುರ ಪಟ್ಟಣ, ನಾಗಲಾಪುರ, ಹೊನ್ನೇಕೂಡಿಗೆ ಭಾಗದಲ್ಲಿ ಇಂದು ಮಾಡಲಾಗಿದೆ ನಾಳೆ ಶೆಟ್ಟಿ ಕೊಪ್ಪ, ಕಳ್ಳಿಕೊಪ್ಪ ಆ ಭಾಗದಲ್ಲಿ ಕಟ್ಟುತ್ತೇವೆ.
ಮುಂದಿನ ದಿನಗಳಲ್ಲಿ ಈ ಜನಹಿತ ಕಾರ್ಯವನ್ನು ಕ್ಷೇತ್ರದಾದ್ಯಂತ ಬಿಜೆಪಿ, ಭಜರಂಗದಳ ಹಾಗೂ ಪರಿವಾರದ ಎಲ್ಲಾ ಕಾರ್ಯಕರ್ತರ ಸಹಕಾರದೊಂದಿಗೆ ಮುಂದುವರೆಸಲಾಗುವುದು ಎಂದರು.

ಯುವ ಮೋರ್ಚಾ ಹಾಗೂ ಬಜರಂಗದ ಕಾರ್ಯಕರ್ತರ ಸಹಕಾರದಿಂದ ಈ ಕಾರ್ಯ ನಡೆದಿದೆ.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!