ಎನ್ ಆರ್ ಪುರ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ. ರಾಜೇಗೌಡರು ನರಸಿಂಹರಾಜಪುರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಹಾಗೆ ಮಾತನಾಡಿದ ಅವರು, ಮಗು ದೇವರ ಕೊಡುಗೆ. ಆ ದೇವರ ವರವನ್ನು ರಕ್ಷಿಸುವುದು ನಮ್ಮೆಲ್ಲರ ಧರ್ಮ ಹಾಗೂ ಜವಾಬ್ದಾರಿ. ಪೋಲಿಯೋ ಎಂಬ ಮಾರಕ ರೋಗವು ಮಕ್ಕಳ ಭವಿಷ್ಯವನ್ನು ಕತ್ತಲಿಗೆ ತಳ್ಳುವ ಅಪಾಯವನ್ನು ಹೊಂದಿದ್ದು, ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಂಕಲ್ಪದೊಂದಿಗೆ ಸರ್ಕಾರ ಪೋಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮಕ್ಕಳ ಆರೋಗ್ಯವೇ ಕುಟುಂಬದ ಶಾಂತಿ, ಸಮಾಜದ ಶಕ್ತಿ ಮತ್ತು ರಾಷ್ಟ್ರದ ಭವಿಷ್ಯ. ಇಂದು ನಾವು ಮಕ್ಕಳಿಗೆ ನೀಡುವ ಒಂದು ಹನಿ ಲಸಿಕೆ, ನಾಳೆಯ ಭಾರತವನ್ನು ಆರೋಗ್ಯವಂತ, ಶಕ್ತಿಶಾಲಿ ಮತ್ತು ಸ್ವಾವಲಂಬಿ ರಾಷ್ಟ್ರವನ್ನಾಗಿ ರೂಪಿಸುವ ಅಡಿಗಲ್ಲಾಗಿದೆ. ಈ ಮಹಾ ಜನಸೇವಾ ಯಜ್ಞದಲ್ಲಿ ಪೋಷಕರು, ಆರೋಗ್ಯ ಸಿಬ್ಬಂದಿ ಮತ್ತು ಸಾರ್ವಜನಿಕರು ಎಲ್ಲರೂ ಕೈಜೋಡಿಸಬೇಕು. ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದು ಎಂಬುದು ನಮ್ಮೆಲ್ಲರ ಸಂಕಲ್ಪವಾಗಬೇಕು” ಎಂದು ತಿಳಿಸಿದರು
