Monday, February 9, 2026
Homeಜಿಲ್ಲಾಸುದ್ದಿಎನ್ ಆರ್ ಪುರ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೃಪಾಶಂಕರ್‌ಗೆ ಬೆಳಕಾದ ವಿಶ್ವನಾಥ್ ಗದ್ದೆಮನೆ

ಎನ್ ಆರ್ ಪುರ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೃಪಾಶಂಕರ್‌ಗೆ ಬೆಳಕಾದ ವಿಶ್ವನಾಥ್ ಗದ್ದೆಮನೆ

ಎನ್ ಆರ್ ಪುರ: ಶೃಂಗೇರಿ ಕ್ಷೇತ್ರದಾದ್ಯಂತ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ವಕೀಲ,ಉದ್ಯಮಿ ವಿಶ್ವನಾಥ್ ಗದ್ದೆಮನೆಯವರು, ಕ್ಯಾನ್ಸರ್ ರೋಗಿಯೊಬ್ಬರ ಬಾಳಿಗೆ ಬೆಳಕಾಗಿ ಅವರ ಜೀವನದಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ.


ಹೌದು ಎನ್ ಆರ್ ಪುರ ತಾಲೂಕಿನ ಅಗ್ರಹಾರ ನಿವಾಸಿಯಾದ ಕೃಪಾಶಂಕರ್ ಎಂಬುವರು ಕಳೆದೊಂದು ವರ್ಷದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು,ಕಾಯಿಲೆಯು 4 ನೇ ಹಂತಕ್ಕೆ ತಲುಪಿತ್ತು. ಈ ಸಮಯ ಸಂಬಂಧಿಕರೂ ಕೂಡ ಸಹಾಯಕ್ಕೆ ಬಾರದೆ ಕೃಪಾಶಂಕರ್ ತುಂಬಾ ಅಸಹಾಯಕರಾಗಿದ್ದರು,ಈ ವಿಷಯವನ್ನು ತಿಳಿದ ವಿಶ್ವನಾಥ್ ಗದ್ದೆಮನೆ ಅಭಿಮಾನಿ ಬಳಗದ ರಾಘವೇಂದ್ರರವರು ಪರಿಸ್ಥಿತಿಯನ್ನು ಅರಿತು ವಿಶ್ವನಾಥ್ ಗದ್ದೆಮನೆಯವರಿಗೆ ವಿಷಯ ತಿಳಿಸಿದ್ದಾರೆ,ತಕ್ಷಣ ಸ್ಪಂದಿಸಿದ ವಿಶ್ವನಾಥ್ ಗದ್ದೆಮನೆಯವರು ಕೃಪಾಶಂಕರ್‌ಗೆ ಬೇಕಾದ ಅಗತ್ಯ ಚಿಕಿತ್ಸೆ,ಔಷಧಿಗಾಗುವ ಸುಮಾರು ಒಂದೂವರೆ ಲಕ್ಷ ರೂ.ಗಳಷ್ಟು ಸಹಾಯ ಮಾಡಿದ್ದಾರೆ.

ಈ ಹಣದಿಂದ ತಾಲೂಕಿನ ಪುಷ್ಪ ನರ್ಸಿಂಗ್ ಹೋಂ‌ಗೆ ದಾಖಲಿಸಿ ಅಲ್ಲಿಂದ ಶಿವಮೊಗ್ಗದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ದಾಖಲಿಸಿ ನಿರಂತರ ವೈದ್ಯರ ತಪಾಸಣೆ,ಶಸ್ತ್ರ ಚಿಕಿತ್ಸೆ ಕೊಡಿಸಿದ ನಂತರ 4 ನೇ ಹಂತಕ್ಕೆ ತಲುಪಿದ ಕಾಯಿಲೆ 2 ನೇ ಹಂತದಷ್ಟು ಇಳಿಕೆ ಕಂಡಿದ್ದು, ಕೃಪಾಶಂಕರ್ ರವರ ಬದುಕಲ್ಲಿ ಹೊಸ ಆಶಯವನ್ನು ಮೂಡಿಸಿದೆ. ಈ ಸಂದರ್ಭದಲ್ಲಿ ಅವರನ್ನು ನೋಡಿಕೊಳ್ಳಲು ಶುಶ್ರೂಕಿಯೊಬ್ಬರನ್ನು ನೇಮಿಸಲಾಗಿತ್ತು ಹಾಗೂ ಹೆಸರು ಹೇಳಲು ಬಯಸದ ಇಬ್ಬರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುವುದಕ್ಕೆ ಸಹಕಾರ ನೀಡಿರುತ್ತಾರೆ.

ಸದ್ಯ ಇದುವರೆಗಿನ ಎಲ್ಲಾ ಚಿಕಿತ್ಸಾ ವೆಚ್ಚವನ್ನು ವಿಶ್ವನಾಥ್ ಗದ್ದೆಮನೆಯವರೇ ನೋಡಿದ್ದು ಅವರ ಅಭಿಮಾನಿ ಬಳಗದ ಸದಸ್ಯರು ಕಾಲಕಾಲಕ್ಕೆ ಬೇಕಾಗುವ ಚಿಕಿತ್ಸೆ, ಔಷಧಿಗಳನ್ನು ನೀಡಿದ್ದಾರೆ. ಸದ್ಯ ಅವರನ್ನು ಆರೈಕೆ ಕೇಂದ್ರವೊಂದಕ್ಕೆ ದಾಖಲಿಸಿ ನೋಡಿಕೊಳ್ಳಲಾಗುತ್ತಿದ್ದು,ಇನ್ನೂ ಅವರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದು ನೆರವಿನ ಅವಶ್ಯಕತೆಯಿದೆ.


ಕೃಪಾಶಂಕರ್ ರವರ ಕಷ್ಟದ ಪರಿಸ್ಥಿತಿಯಲ್ಲಿ ಕೈ ಹಿಡಿದು ಸಹಾಯ ಮಾಡಿ ಅವರ ಬದುಕಲ್ಲಿ ಹೊಸ ಆಶಯ ಮೂಡಿಸಿದ ವಿಶ್ವನಾಥ್ ಗದ್ದೆಮನೆ ನಿಜಕ್ಕೂ ಒಬ್ಬ ಉತ್ತಮ ಸಮಾಜ ಸೈವಕ ಎಂದರೆ ತಪ್ಪಾಗಲಾರದು. ಇವರ ಈ ಸಮಾಜ ಸೇವೆ ಹೀಗೆ ಮುಂದುವರೆಯುತ್ತಿರಲಿ ಎಂದು ಪಬ್ಲಿಕ್‌ ಇಂಪ್ಯಾಕ್ಟ್‌ ಮೂಲಕ ಹಾರೈಸೋಣ.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!