ಕಳಸ: ಹೈಟೆಕ್ ಝೈಲೋ ಕಾರಿನಲ್ಲಿ ಬಂದು ನಾಲ್ಕು ಹಸುಗಳನ್ನ ಕಳ್ಳತನ ಮಾಡಲು ಯತ್ನಿಸಿದವರನ್ನ ಬೆನ್ನಟ್ಟಿ ದನಗಳನ್ನ ರಕ್ಷಿಸಿರುವ ಘಟನೆ ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ನಡೆದಿದೆ.

ಹೌದು … ಗುರುವಾರ ಪೊಲೀಸರು ಸಿನಿಮಿಯ ರೀತಿಯಲ್ಲಿ ಚೇಸ್ ಮಾಡಿದ್ದ ಈ ವೇಳೆ ದನಗಳ್ಳರು ಕಾರು ಬಿಟ್ಟು ಎಸ್ಕೇಪ್ ಆಗಿದ್ದಾರೆ. ಪರಾರಿಯಾಗಿರುವ ಆರೋಪಿಗಳಿಗೆ ಮಧ್ಯರಾತ್ರಿ ಶೋಧ ಕಾರ್ಯ ನಡೆಸಿ ಇಬ್ಬರು ದನಗಳ್ಳರನ್ನ ಬಂಧಿಸಲಾಗಿದ್ದುಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಗೆ ದನಗಳ್ಳರ ವಾಹನವನ್ನು ಚೇಸ್ ಮಾಡುವ ವೇಳೆ ಪೊಲೀಸರ ಮೇಲೆ ಕಬ್ಬಿಣದ ರಾಡ್ ಬೀಸಿದ ದನಗಳ್ಳರು ಆದರೆ ಪೊಲೀಸರು ಮಧ್ಯರಾತ್ರಿ ಹುಡುಕಾಡಿ ಇಬ್ಬರು ದನಗಳ್ಳರನ್ನ ಬಂಧಿಸಲಾಗಿದ್ದು ಬಂಧಿತರಿಂದ ಕಾರು, ರಾಡ್, 4 ಮೊಬೈಲ್, 4 ದನಗಳನ್ನ ವಶಪಡಿಸಿಕೊಳ್ಳಲಾಗಿದೆ.