Friday, February 13, 2026
Homebig breakingನೀನಲ್ಲ ನಿಮ್ಮ ಅಪ್ಪ ಬಂದ್ರೂ ನನ್ನ *** ಟಚ್‌ ಮಾಡೋದಕ್ಕಾಗಲ್ಲ - ಸುಧಾಕರ್ ವಿರುದ್ಧ ಪ್ರದೀಪ್‌...

ನೀನಲ್ಲ ನಿಮ್ಮ ಅಪ್ಪ ಬಂದ್ರೂ ನನ್ನ *** ಟಚ್‌ ಮಾಡೋದಕ್ಕಾಗಲ್ಲ – ಸುಧಾಕರ್ ವಿರುದ್ಧ ಪ್ರದೀಪ್‌ ಈಶ್ವರ್‌ ವಾಗ್ದಾಳಿ..!

ಚಿಕ್ಕಬಳ್ಳಾಪುರ : ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ. ಕೆ. ಸುಧಾಕರ್ ನಡುವಿನ ಟಾಕ್‌ಫೈಟ್‌ ಮತ್ತೆ ಶುರುವಾಗಿದೆ. ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರ ಹಿಡಿದ ಬೆನ್ನಲ್ಲೇ ಪ್ರದೀಪ್ ಈಶ್ವರ್ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಪ್ರದೀಪ್ ಈಶ್ವರ್, ಮಿಸ್ಟರ್ ಎಂಪಿ ನೀನಲ್ಲ ನಿಮ್ಮ ಅಪ್ಪ ಬಂದರೂ ನನ್ನ ಟಚ್ ಮಾಡಕ್ಕಾಗಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಸುಧಾಕರ್ ಒಬ್ಬ ಕೋವಿಡ್ ಕಳ್ಳ. ಕೋವಿಡ್‌ ಹಗರಣದಲ್ಲಿ ನಿನ್ನ ಒಳಗೆ‌ ಕಳುಹಿಸುತ್ತೇನೆ. ಒಳಗೆ ಕಳುಹಿಸಿಯೇ ತೀರುತ್ತೇನೆ. ನಗರಸಭೆ ಚುನಾವಣೆಗಾಗಿ ಕೋವಿಡ್ ಸಂದರ್ಭದಲ್ಲಿ ಲೂಟಿ ಮಾಡಿರುವ 7-8 ಕೋಟಿ ದುಡ್ಡು ಖರ್ಚು ಮಾಡಿದ್ದಾನೆ. ರಾಜ್ಯ ದೇಶ ಅಲ್ಲ ನಿಮ್ಮಪ್ಪನ ಕೈಯಲ್ಲೂ ನನ್ನ ಕೂದಲು ಮುಟ್ಟಕ್ಕಾಗಲ್ಲ. ಮುಂದಿನ ದಿನಗಳಲ್ಲಿ ನಗಸಭೆ ಅಧಿಕಾರ ನಮ್ಮ ಕೈಗೆ ಬರುವ ಹಾಗೆ ಮಾಡ್ತೀನಿ, ಒಬ್ಬ ಗಂಡ್ಸು ಎಂಎಲ್‌ಎ ಆಗಿರೋದು ಅನ್ನೋದು ಅವರಿಗೆ ತಿಳಿದಿರಲಿ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!