ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷೆಯಾಗಿ ಶೀಲಾ ದಿನೇಶ್ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಫೀಲ್ಡ್ ಗೆ ಇಳಿದಿದ್ದಾರೆ. ಸ್ವಚ್ಛತೆಗೆ ಮೊದಲ ಆದ್ಯತೆ ಕೊಡುವುದಾಗಿ ಮೊನ್ನೆಯಷ್ಟೇ ಹೇಳಿದ್ರು. ಇಂದು ಬೆಳ್ಳಂ ಬೆಳಗ್ಗೆ ಪೌರ ಕಾರ್ಮಿಕರ ಜೊತೆಗೂಡಿ ಅಧ್ಯಕ್ಷೆ, ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ರು.

ಸ್ವಚ್ಛತೆ ಜೊತೆಯಲ್ಲಿ ಅಭಿವೃದ್ಧಿ ಆಗಬೇಕಿದ್ದು, ಹೀಗಾಗಿಯೇ ಜೆಡಿಎಸ್ ಸದಸ್ಯೆಗೆ ನಗರಸಭೆ ಅಧ್ಯಕ್ಷೆಯಾಗಲು ಬಿಜೆಪಿ ಹಾಗೂ ಕಾಂಗ್ರೆಸ್ ಸಹಕಾರ ನೀಡಿದ್ದಾರೆ. ರಾಜ್ಯದಲ್ಲೇ ನಂಬರ್ ಒನ್ ನಗರಸಭೆ ಮಾಡೇ ತೀರುತ್ತೇವೆ ಅಂತಾ ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಹೇಳಿದ್ದಾರೆ.

ಹಾಗೆ ಚಿಕ್ಕಮಗಳೂರನ್ನ ರಾಜ್ಯದಲ್ಲೇ ನಂಬರ್ ಒನ್ ನಗರಸಭೆ ಮಾಡುತ್ತೇವೆ ಸಿ.ಟಿ ರವಿ, ತಮ್ಮಯ್ಯ ಎಲ್ಲರೂ ಬೆಂಬಲ ಕೊಟ್ಟಿದ್ದಾರೆ.ಚಿಕ್ಕಮಗಳೂರು ನಗರಸಭೆಯನ್ನ ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ನಗರಸಭೆ ಅಧ್ಯಕ್ಷೆಯಾಗಿ ಶೀಲಾ ದಿನೇಶ್ ಹೇಳಿದ್ದಾರೆ.