ಚಿಕ್ಕಮಗಳೂರು: ಕುದುರೆಮುಖ ಪಶ್ಚಿಮ ಘಟ್ಟಗಳ ಅರಣ್ಯ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ಚಿಕ್ಕಮಗಳೂರು ಅಪರ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಪರಿಸರ ವಿಜ್ಞಾನ ಸಚಿವರಿಗೆ ಮನವಿ ಸಲ್ಲಿಸಲಾಯಿತು

ಈ ವೇಳೆ ಬಿಜೆಪಿ ಮುಖಂಡರು ಹಾಗೂ ಭದ್ರಾ ಪರಿಸರ ಸಂರಕ್ಷಣಾ ಪ್ರತಿಷ್ಠಾನ ಸಂಸ್ಥಾಪಕರಾದ ಡಾಕ್ಟರ್ ಶಿವಪ್ರಸಾದ್ ಅವರು ಮಾತನಾಡಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ಕರ್ನಾಟಕ ಪಶ್ಚಿಮ ಘಟ್ಟಗಳಲ್ಲಿದ್ದು 600 ಚದರ ಕಿಲೋ ಮೀಟರ್ ವಿಸ್ತರಣಾದಲ್ಲಿ ಹರಡಿಕೊಂಡಿದೆ. ಸದಾ ಹರಿಯುವ ನದಿಗಳು ಹಾಗೂ 897 ಸಸ್ಯ ಪ್ರಭೇದಗಳು ಹೊಂದಿವೆ. ಇದು ತುಂಗಭದ್ರ ನೇತ್ರಾವತಿ ನದಿಗಳ ಜನ್ಮಸ್ಥಳವಾಗಿದೆ. ಈ ಪ್ರದೇಶವು ದಕ್ಷಿಣ ಭಾರತದಲ್ಲಿ ತೇವಭರಿತ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ ಎಂದರು.
ಹಾಗೆ ಅರಣ್ಯ ಸಂಶೋಧನಾ ಕೇಂದ್ರಕ್ಕೆ ಸೂಕ್ತವಾಗಿದೆ ಆದ್ದರಿಂದ ಪ್ರದೇಶದಲ್ಲಿ ಅರಣ್ಯ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲು ಕೇಂದ್ರ ಅರಣ್ಯ ಪರಿಸರ ಮತ್ತು ಹವಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮನವಿ ಮಾಡಲಾಗಿದೆ ಎಂದರು.
ಈ ವೇಳೆ ಭದ್ರ ಪರಿಸರ ಸಂರಕ್ಷಣಾ ಪ್ರತಿಷ್ಠಾನ ಚಂದ್ರಪ್ಪ ವೆಂಕಟೇಶ್ ರವಿಕುಮಾರ್ ಮತ್ತು ಎಚ್ಎಮ್ ರೇಣುಕಾರತೆ ಉಪಸ್ಥಿತರಿದ್ದರು
