ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸದ್ಯ ಷಷ್ಠಿ ಮಹೋತ್ಸವದ ಸಂಭ್ರಮ ಮನೆ ಮಾಡಿದೆ. ದೇವಸ್ಥಾನದಲ್ಲಿ ಪೂರ್ವ ಪದ್ಧತಿಯಂತೆ ಕೊಪ್ಪರಿಗೆ ಏರುವುದರೊಂದಿಗೆ ಜಾತ್ರಾ ಮಹೋತ್ಸವ ಆರಂಭವಾಗುವುದು ಪದ್ಧತಿ. ಕೊಪ್ಪರಿಗೆ ಏರಿದ ಬಳಿಕ ಗ್ರಾಮದಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ಮಣ್ಣು ಆಗಿಯುವುದು ಮರ ಕಡಿಯುವುದು ನಿಷಿದ್ಧ ಇದು ದೇವಸ್ಥಾನದ ಡಿಟ್ಟಂ ಪುಸ್ತಕದಲ್ಲೂ ಕೂಡ ಉಲ್ಲೇಖ ಇರುವ ಅಂಶ. ಆದರೆ ಇವತ್ತು ಕೊಪ್ಪರಿಗೆ ಏರಿದ್ದರೂ ಕೂಡ ಸುಬ್ರಹ್ಮಣ್ಯ ದೇವಸ್ಥಾನದ ಎದುರುಗಡೆ ಜೆಸಿಬಿ ಯಲ್ಲಿ ಮಣ್ಣು ಅಗೆಯುದು ಮರ ಕಡಿಯುವ ಕೆಲಸ ನಡೆಯುತ್ತಿದ್ದು ಇದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು . ಇದನ್ನು ಮನಗಂಡು ಮಾಜಿ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳು ಊರಿನ ಪ್ರಮುಖರು ದೇವಳದ ಭಕ್ತರು ಜೊತೆಯಾಗಿ ಸೇರಿಕೊಂಡು ಕಾರ್ಯನಿರ್ವಹಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ವಿಷಯ ಮನದಟ್ಟು ಮಾಡಿ ಕೆಲಸವನ್ನು ಕೆಲಸ ನಿಲ್ಲಿಸಿದ್ದಾರೆ. ಭಕ್ತರ ನಂಬಿಕೆಯ ಜೊತೆಗೆ ಊರಿನ ಆಚಾರ ಪದ್ಧತಿಗೆ ಅಧಿಕಾರಿಗಳು ಮಹತ್ವವನ್ನು ನೀಡಬೇಕು ನಮ್ಮ ನಂಬಿಕೆಗಳನ್ನು ಮುಂದುವರಿಸಿಕೊಂಡು ಶ್ರೀ ದೇವಳದ ಪಾವಿತ್ರತೆಯನ್ನು ಕಾಪಾಡಬೇಕು ಎಂದು ತಿಳಿಸಿದ್ದಾರೆ.
ಸುಬ್ರಮಣ್ಯ; ಕೊಪ್ಪರಿಗೆ ಏರಿದರೂ ಮಣ್ಣು ಅಗೆತ, ಮರಗಳ ಕಟಾವು; ಕಾರ್ಯನಿರ್ವಹಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು
RELATED ARTICLES
