Tumakuru : ತಮಗೆ ತುಮಕೂರು ಟಿಕೆಟ್ ಕೈತಪ್ಪಿದ್ದಕ್ಕೆ ಬಿ ಎಸ್ ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರದಲ್ಲಿ ಮಾತನಾಡಿದ ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಸೋಮಣ್ಣನ ಬೈಗುಳಕ್ಕೆ ಯಡಿಯೂರಪ್ಪ ಹೆದರಿಕೊಂಡು ಯಡಿಯೂರಪ್ಪ ನನ್ನ ಬಲಿ ಹಾಕಿದ್ರು. ಆ ನೋವು ನನಗಿದೆ ಎಂದು ಬೇಸರ ಹೊರ ಹಾಕಿದ್ದಾರೆ.

ಬಿ ಎಸ್ ಯಡಿಯೂರಪ್ಪ ಅವರಿಗೆ ಈಶ್ವರಪ್ಪ ಅವರನ್ನು ಕಟ್ಟಿಕೊಂಡು ಏನಾಗಬೇಕು? ಅಪ್ಪ ಮಕ್ಕಳಿಗೆ ಸ್ವಹಿತಾಸಕ್ತಿಯೇ ಹೆಚ್ಚಾಗಿದೆ.ನಾವು ನೆಮ್ಮದಿಯಾಗಿರಬಹುದು ಎಂದು ಅಂದುಕೊಂಡಿರಬಹುದು. ನಮ್ಮನ್ನು ನಂಬಿಕೊಂಡಿರುವವರ ಕಥೆ ಏನಾಗಬಹುದು? ಎಂದು ಪ್ರಶ್ನೆ ಮಾಡಿದ್ದಾರೆ.
ಟಿಕೆಟಿಗೆ ಹೋರಾಟ ಮಾಡಿಲ್ಲ ಅನ್ನೋದೇ ನೋವಾಗಿದೆ. ಇಷ್ಟೆಲ್ಲಾ ಆದರೂ ಇಲ್ಲಿ ಇರಬೇಕಾ ಬೇಡವಾ ಎಂಬ ಚಿಂತೆ ಶುರುವಾಗಿದೆ.ಪಕ್ಷದಲ್ಲಿ ಇರಬೇಕಾ ಅಥವಾ ಪಕ್ಷದಲ್ಲಿ ಇರಬಾರದ ಎನ್ನುವ ಕುರಿತು ಚಿಂತನೆ ಆಗಿದೆ. ಕಾರ್ಯಕರ್ತರನ್ನ ಕರೆದು ಈ ಕುರಿತಂತೆ ನಾನು ಕೂಡ ಅಭಿಪ್ರಾಯವನ್ನು ಸಂಗ್ರಹಿಸುತ್ತೇನೆ ಯಾವ ದಿಕ್ಕಿನಲ್ಲಿ ಹೋದರೆ ಅನುಕೂಲ ಎಂದು ಕೇಳುತ್ತೇನೆ ಕಾಂಗ್ರೆಸ್ ಪಕ್ಷಕ್ಕೆ ಹೋದರೆ ಸೇಫ್ ಜೋನ್ ಅಲ್ಲ ಇಲ್ಲಿರುವುದು ಸೇಫ್ ಅಂತ ನಾನು ಅಂದುಕೊಂಡಿಲ್ಲ ಕಾರ್ಯಕರ್ತರ ಸಭೆ ಕರೆದು ತೀರ್ಮಾನ ಮಾಡುತ್ತೇನೆ ಎಂದು ಜೆಸಿ ಪುರದಲ್ಲಿ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಹೇಳಿದ್ದಾರೆ.