ಚಿಕ್ಕಮಗಳೂರು: ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಇಲ್ಲದೆ ಕಸವನ್ನು ಎಲ್ಲೆಂದರಲ್ಲಿ ಹಾಕಿ ಪ್ರಯಾಣಿಕರೆ ತೊಂದರೆಯಾಗುತ್ತಿರುವ ಕುರಿತು ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಸೂಚನೆ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ತಿಳಿಸಿದರು.

ಅವರು ಇಂದು ಕೆಎಸ್ಆರ್ಟಿಸಿ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಕಸವನ್ನು ಹಾಕುವುದರ ಜೊತೆಗೆ ಸ್ವಚ್ಚತೆ ಕಾಪಾಡದಿರುವ ಬಗ್ಗೆ ಗುರುನಾಥ ವೃತ್ತದ ಬಿಎಂಶ್ರೀ ರಸ್ತೆ, ಶೆಟ್ರು ಬೀದಿಯಲ್ಲಿ ಫುಟ್ಪಾತ್ ಮೇಲೆ ವಸ್ತುಗಳನ್ನು ಇಟ್ಟು ನಾಗರಿಕರಿಗೆ ತೊಂದರೆ ಕೊಡುತ್ತಿರುವ ವರ್ತಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾಗೆ ನಗರದ ದಿನಸಿ ತರಕಾರಿ, ಫ್ಯಾನ್ಸಿ ಸ್ಟೋರ್, ಬಟ್ಟೆ ಅಂಗಡಿ ಮುಂತಾದ ಅಂಗಡಿಗಳ ವರ್ತಕರು ಫುಟ್ಭಾತ್ ಮೇಲೆ ವಸ್ತುಗಳನ್ನು ಇಡುತ್ತಿರುವುದರಿಂದವಾಹನ ಸಂಚಲಕ್ಕೆ ಮತ್ತು ನಾಗರಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದರು, ವ್ಯಾಪಾರಕ್ಕೆ ತೊಂದರೆ ಆಗದಂತೆ ಚಿಕ್ಕ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವುದನ್ನು ತೋರಿಸಿದ್ದು, ಹಾಗೆ ನೀವೆಲ್ಲಾ ಕಸವನ್ನು ಒಂದೆಡೆ ಗುಡ್ಡೆ ಹಾಕಿ ಅಥವಾ ಮೂಟೆಗೆ ತುಂಬಿಸಿದರೆ ಪೌರಕಾರ್ಮಿಕರಿಗೆ ಕೆಲಸ ಮಾಡಲು ಸುಗಮವಾಗಲಿದೆ ಎಂದು ಸಲಹೆ ನೀಡಿದರು
ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಅವರು ಮಾತನಾಡಿ, ನಗರದ ವರ್ತಕರು ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ನಡೆಸಬೇಕೆಂದು ಮನವಿ ಮಾಡಿದರು ಹಾಗೆ ಸಾರಿಗೆ ಸಂಸ್ಥೆ ಎರಡು ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಮತ್ತು ಅಂಗಡಿಗಳ ಮುಂದೆ ವಸ್ತುಗಳನ್ನು ಇಡದಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು