ಸಕಲೇಶಪುರ: ಕುಗ್ರಾಮದ ಈ ಮನೆಗೆ ಕರೆಂಟ್ ಇಲ್ಲದೆ ಹನ್ನೆರಡು ವರ್ಷ ಅಯ್ಯೋ ಇದೇನಪ್ಪ ಅಂತ ಆಶ್ಚರ್ಯ ಆಯ್ತಾ ಹೌದು ನಂಬಲು ಅಸಾಧ್ಯವಾದರೂ ಇದು ಸತ್ಯ
ಸಕಲೇಶಪುರ ತಾಲೂಕಿನ ಈ ಪುಟ್ಟ ಹಳ್ಳಿಯೇ ಬಾಣಿಬೈಲು. ಇದೆ ಗ್ರಾಮದ ಮನೆಗೆ ವಿದ್ಯುತ್ ಸಮಸ್ಯೆ ನಿನ್ನೆ ಮೊನ್ನೆಯದಲ್ಲ ಬರೋಬ್ಬರಿ ಹನ್ನೆರಡು ವರ್ಷ. ಮಾಹಿತಿ ಆಧರಿಸಿ ಬೆನ್ನತ್ತಿದ ಪಬ್ಲಿಕ್ ಇಂಪಾಕ್ಟ್ ವರದಿಗಾರರಿಗೂ ಸ್ವಲ್ಪ ಕರೆಂಟ್ ಶಾಕ್ ಹೊಡೆದಂತೆ ಆಯಿತು.
ಮನೆಯ ಜಾಡು ಹಿಡಿದು ಹೊರಟಾಗ ಅಬ್ಬಾಬ್ಬಾ ದಾರಿ ತಪ್ಪಿ ಬಂದ್ವ ಅನ್ನಿಸಿತು ಅಯ್ಯೋ ಅದೇನು ದಾರಿ ಬರಿ ಕಲ್ಲುಗಳಿಂದ ಹಾಸಿದ ಹೊದಿಕೆಯಂತಿತ್ತು ಆ ರಸ್ತೆ. ಅಂತೂ ಇಂತೂ ಆ ಮನೆ ತಲುಪುವ ಹೊತ್ತಿಗೆ ಗಾಡಿ ಬೋಲ್ಟ್ ನಟ್ ಜೊತೆಗೆ ಬಾಡಿ ಬೋಲ್ಟ್ ನಟ್ ಕೂಡ ಲೂಸ್ ಆಗಿದ್ದವು
ಅದೇನೇ ಇರಲಿ, ಆ ಹನ್ನೆರಡು ವರ್ಷ ಆ ಜಾಗದಲ್ಲಿ ವಾಸ ಮಾಡ್ತಿರೋ ಗೌಡ್ರನ್ನ ಪ್ರಶ್ನೆ ಮಾಡಿದಾಗ ಹಿಂಗಂದ್ರು ಎಲೆಕ್ಷನ್ ಬಂತು ಅಂದ್ರೆ ಪ್ಯಾಂಟ್ ಮೇಲೆತ್ತಿ ಜಿಗಣೆ ಇರ್ತವೆ ಜೋಪಾನ ಅನ್ನೋ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ, ಹನ್ನೆರಡು ವರ್ಷ ಆದ್ರೂ ಕರೆಂಟ್ ಇಲ್ಲ ಎಂದು ಕಿಡಿಕಾರಿದರು.
ಆನೆ ಓಡಾಡ್ತವೆ, ಮಕ್ಕಳು ಮರಿ ಇದಾವೆ ಯಾವತ್ತೂ ಏನು ಆಗ್ತಿವೋ ಅಂತ ಕಣ್ಣೀರು ಹಾಕಿದ್ದು ಮಾತ್ರ ಬೇಸರದ ಸಂಗತಿ. ನಾಲ್ಕೇ ಕಂಬ ಬೇಕಾಗಿರೋದು ಸ್ಯಾಂಕ್ಷನ್ ಮಾಡೋಕು. ದರಿದ್ರ ರಾಜಕಾರಿಣಿಗಳಿಗೇನ್ ರೋಗ ನಮಗೆ ಗೊತ್ತಿಲ್ಲ. ಜೆ. ಇ.ಗು ಪತ್ರ ಕೊಟ್ಟಿದ್ದು ಆಯ್ತು ಎಲ್ಲರಿಗೂ ಕೊಟ್ವಿ ಏನು ಪ್ರಯೋಜನ ಆಗ್ಲಿಲ್ಲ ಜೀವನ ಸಾಕಾಗಿದೆ ಅಂತಾರೆ ಬಾಣಿಬೈಲು ವಾಸಿ ಸಂದೇಶ್ ತಮ್ಮ ಗೋಳನ್ನ ಪಬ್ಲಿಕ್ ಇಂಪ್ಯಾಕ್ಟ್ ಜೊತೆ ತೋಡಿಕೊಂಡರು.
ಎಲ್ಲಿದ್ದಾರೆ ಆ ಊರಿಗೆ ಸಂಬಂಧಿಸಿದ ಶಾಸಕರು, ಸಂಸದರೇ, ಗ್ರಾಮ ಪಂಚಾಯತ್ ನವರೇ, ನಿಮಗೆ ಓಟು ಕೇಳುವಾಗ ಮಾತ್ರ ಇಂಥ ಊರು ನೆನಪಾಗೋದಾ ಆಮೇಲೆ ಇದೆಲ್ಲಾ ನೆನಪಾಗಲ್ವಾ. ಜನರ ರಕ್ಷಣೆ ನಿಮಗೆ ಬೇಕಾಗಿಲ್ವಾ ಏನೂ ಮಾಡ್ತಿದ್ದಾರೆ ಶಾಸಕರು, ಸಂಸದರು. ಬರೋಬ್ಬರಿ 12 ವರ್ಷದಿಂದ ಕರೆಂಟ್ ಇಲ್ಲಾಂದ್ರೆ ಹೇಗೆ ? ಅಲ್ಲಿರುವ ಮಕ್ಕಳ ವಿದ್ಯಾಭ್ಯಾಸ ನಡೆಯೋದು ಆದ್ರೂ ಹೇಗೆ ಏನು ಕಣ್ಮುಚ್ಚಿ ಕುಳಿತ್ತಿದ್ದೀಯಾ ಅಲ್ಲಿನ ಗ್ರಾಮ ಪಂಚಾಯತ್ ನಿಮಗೆಲ್ಲಾ ನಾಚಿಕೆಯಾಗಬೇಕು.
ಪಬ್ಲಿಕ್ ಇಂಪ್ಯಾಕ್ಟ್ ವರದಿ ಬಳಿಕ ಎಚ್ಚೆತ್ತುಕೊಳ್ಳುತ್ತಾರ ನೋಡಬೇಕು , ಅಲ್ಲಿನ ಗ್ರಾಮಸ್ಥರಿಗೆ ನೆರವು ನೀಡ್ತಾರಾ ಕಾದು ನೋಡೋಣ.