ಹಾಸನ : ಮನೆಯ ಮುಂದೆ ಒಣಗಲು ಹಾಕಿದ್ದ ಕಾಫಿ ಬೀಜ ಕಳುವಿಗೆ ಯತ್ನ ನಡೆಸಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಬೆಳಗೋಡು ಹೋಬಳಿಯ (ಬಾಗೆಪೋಸ್ಟ್) ಕಾಕನಮನೆ ಗ್ರಾಮದಲ್ಲಿ ನಡೆದಿದೆ.
ಹೌದು .. ಗ್ರಾಮದ ಈರೇಶ್ ಎಂಬುವವರ ಮನೆಯ ಮುಂದೆ ಒಣಗಲು ಹಾಕಿದ್ದ ಕಾಫಿ ಭಾನುವಾರ ತಡರಾತ್ರಿ ಬೀಜ ಖಾಲಿ ಪ್ಲಾಸ್ಟಿಕ್ ಚೀಲಗಳೊಂದಿಗೆ ಒಂದೇ ಬೈಕ್ನಲ್ಲಿ ಮೂವರು ಖದೀಮರು ಕಾಫಿ ಕದಿಯಲು ಬಂದಿದ್ದು ಈ ವೇಳೆ ಕಳ್ಳತನ ಮಾಡುವಾಗಲೇ ಸ್ಥಳೀಯರ ಕೈಗೆ ಸಿಕ್ಕಿಹಾಕಿಕೊಂಡ ಕಳ್ಳರು.
ಕಳ್ಳರಿಗೆ ಗೂಸಾ ಕೊಟ್ಟು ಬೈಕ್ ಸಮೇತ ಕಳ್ಳರನ್ನು ಹಿಡಿದ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು.ಬಾಳ್ಳುಪೇಟೆ ಗ್ರಾಮದ ರಾಜಾಸಾಬ್, ನಿಡನೂರು ಗ್ರಾಮದ ಲೋಹಿತಾಶ್ವ, ಕಾಂತರಾಜು ಬಂಧಿತ ಆರೋಪಿಗಳು.
ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
