ಸಕಲೇಶಪುರ: ಹೊಸೂರಿನ ಐ.ಬಿ.ಸಿ ಎಸ್ಟೇಟ್ ನಲ್ಲಿ ಆಟ ಆಡುವಾಗ ಆಕಸ್ಮಿಕವಾಗಿ ನೀರಿನ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದುರ್ಮರಣ ಹೊಂದಿದ್ದು ಮೃತರ ಮನೆಗಳಿಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ವೇಳೆ ವೈಯಕ್ತಿಕವಾಗಿ ಪರಿಹಾರ ನೀಡಿ, ಈ ಘಟನೆಯ ಕುರಿತು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡುವ ವಿಶ್ವಾಸವನ್ನು ತುಂಬಿದರು.

ಸಕಲೇಶಪುರ ತಾಲೂಕು ಹಲಸುಲಿಗೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಹೊಸೂರಿನ ಐ.ಬಿ.ಸಿ ಎಸ್ಟೇಟ್ ನಲ್ಲಿ ಆಟ ಆಡುವಾಗ ಆಕಸ್ಮಿಕವಾಗಿ ಹೊಂಡದ ನೀರಿಗೆ ಬಿದ್ದು ಎಸ್ಟೇಟಿನ ಕಾರ್ಮಿಕರಾದ ಕೃಷ್ಣ ರವರ ಮಗನಾದ ಪ್ರಣಯ್ (7 ವರ್ಷ) ಮತ್ತು ಪ್ರಶಾಂತ್ ರವರ ಮಗನಾದ ನಿಶಾಂತ್ (5 ವರ್ಷ) ದುರ್ಮರಣ ಹೊಂದಿದ್ದರು.
