ಹಾಸನ : ಬೀದಿ ನಾಯಿಗಳ ದಾಳಿಗೆ ಜಿಂಕೆ ಬಲಿಯಾಗಿರುವ ಘಟನೆ ಸಕಲೇಶಪುರ ತಾಲೂಕಿನ ಹಂಜಗೋಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾಜಿಶಾಸಕ ಎಚ್.ಎಂ.ವಿಶ್ವನಾಥ್ ಅವರ ತೋಟದಲ್ಲಿ ಸಾವನ್ನಪ್ಪಿರುವ ಗಂಡು ಜಿಂಕೆಯಾಗಿದ್ದು ಕೆಲ ದಿನಗಳಿಂದ ಗ್ರಾಮದ ಸಮೀಪವೇ ಬೀಡುಬಿಟ್ಟಿತ್ತು, ಕಳೆದ ರಾತ್ರಿ ಜಿಂಕೆ ಮೇಲೆ ದಾಳಿ ಮಾಡಿ ಕಚ್ಚಿ ಸಾಯಿಸಿರುವ ಬೀದಿನಾಯಿಗಳು.
ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಬೀದಿ ನಾಯಿಗಳ ದಾಳಿಗೆ ಬಲಿಯಾಗುತ್ತಿರುವ ಜಿಂಕೆಗಳು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಾಘಿದೆ.
ಮರಣೋತ್ತರ ಪರೀಕ್ಷೆಗೆ ಜಿಂಕೆ ಮೃತದೇಹ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.