ಸಕಲೇಶಪುರ: ತುಮಕೂರಿನಿಂದ ಮಂಗಳೂರಿಗೆ ಅರಣ್ಯ ಇಲಾಖೆಯ ಅನುಮತಿ ಪತ್ರವಿಲ್ಲದೇ ಕೆಎ53 ಎಎಎ6013 ಸಂಖ್ಯೆಯ ಲಾರಿಯಲ್ಲಿ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ವಲಯ ಅಧಿಕಾರಿಗಳಾದ ಹೇಮಂತ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಲೋಕೇಶ್ ಬಿ.ಎಸ್, ಜಯಸ್ವಾಮಿ ಹಾಗೂ ತಂಡದವರ ಪರಿಶ್ರಮದಲ್ಲಿ ಲಾರಿ ಅಮಾನತು ಪಡಿಸಿ ಇಲಾಖಾ ಪರವಾನಗಿ ದಾಖಲಿಸಿದ್ದಾರೆ.
ಅರಣ್ಯ ಇಲಾಖೆಯ ದಿಟ್ಟ ಕ್ರಮದಿಂದ ಪರಿಸರ ಸಂರಕ್ಷಣೆಗಾಗಿ ಅಧಿಕಾರಿಗಳು ಎಷ್ಟು ಬದ್ಧರಾಗಿದ್ದರೆಂಬುದು ಮತ್ತೊಮ್ಮೆ ಸಾಬೀತಾಗಿದೆ. ಅರಣ್ಯ ಉಳಿಸುವುದು ಜನರ ಹೊಣೆಯಾಗಿರುತ್ತದೆ ಅದನ್ನ ಸಂರಕ್ಷಿಸಬೇಕು.
