Sunday, August 3, 2025
!-- afp header code starts here -->
Homeಜಿಲ್ಲಾಸುದ್ದಿಸಕಲೇಶಪುರ: ಮಳೆಯಿಂದ ಮಂಜರಾಬಾದ್ ಕೋಟೆ ಕುಸಿತ!

ಸಕಲೇಶಪುರ: ಮಳೆಯಿಂದ ಮಂಜರಾಬಾದ್ ಕೋಟೆ ಕುಸಿತ!

ಹಾಸನ: ಮಳೆಯಿಂದಾಗಿ ಮಂಜರಾಬಾದ್ ಕೋಟೆಯ ಒಂದು ಭಾಗ ಮಳೆಯಿಂದ ಕುಸಿತ ಉಂಟಾಗಿದೆ.ಕೋಟೆಯ ಒಳಭಾಗದ ಸೈನಿಕರು ವಿಶ್ರಾಂತಿ ಪಡೆಯುತ್ತಿದ್ದ ಭಾಗ ಎಂದು ಹೇಳಲಾಗುವ ಪ್ರದೇಶವು ಕುಸಿದು ಬಿದ್ದಿದೆ. ತಡರಾತ್ರಿ ಈ ಘಟನೆ ಸಂಭವಿಸಿದೆ. ಮುಂಜಾನೆ ಕೋಟೆಯ ಕಾವಲುಗಾರ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಬಂದಾಗ ಗೋಚರಿಸಿದೆ.

ನಕ್ಷತ್ರ ಕಾಲದಲ್ಲಿರುವ ಮಂಜರಬಾದ್ ಕೋಟೆ ಪ್ರವಾಸಿಗರನ್ನು ಆಕರ್ಷಿಸುತ್ತದೆ, ದಿನನಿತ್ಯ ನೂರಾರು ಶುಭಸಿದರು ಇಲ್ಲಿಗೆ ಭೇಟಿ ನೀಡುತ್ತಾರೆ. ಮುಂಜರಾಬಾದ್ ಕೋಟೆ ಯನ್ನು ಟಿಪ್ಪು ಸುಲ್ತಾನ್ 1785 ರಲ್ಲಿ ನಿರ್ಮಾಣ ಮಾಡಿ 1792 ರಲ್ಲಿ ಪೂರ್ಣಗೊಳಿಸಿದ್ದರು.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಕೇಂದ್ರದಿಂದ 5 ಕಿ.ಮೀ. ಅಂತರದಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅಡಾಣಿ ಗುಡ್ಡದ ಮೇಲೆ ಈ ಕೋಟೆ ರಚಿತಗೊಂಡಿದೆ.

ಸಮುದ್ರಮಟ್ಟದಿಂದ ಈ ಕೋಟೆಯು 988 ಮೀಟರ್ ಎತ್ತರದಲ್ಲಿದೆ. ಅಂದರೆ 3393 ಅಡಿಗಳು. 252 ಮೆಟ್ಟಿಲುಗಳನ್ನು ಏರಿದರೆ ಸಿಗುವ ಈ ಕೋಟೆಯು ನಕ್ಷತ್ರಾಕಾರದ ರಚನೆಯುಳ್ಳ ವಿಶಿಷ್ಟ ತಂತ್ರವನ್ನೊಳಗೊಂಡಿದೆ.

ಈ ಕೋಟೆಯ ಸಂರಕ್ಷಣಾ ಜವಾಬ್ದಾರಿಯನ್ನು 1956ರ ಪುರಾತತ್ವ ಇಲಾಖೆಯು ವಹಿಸಿಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!