Monday, August 4, 2025
!-- afp header code starts here -->
Homeಜಿಲ್ಲಾಸುದ್ದಿಸಕಲೇಶಪುರ RTO ಕಚೇರಿ ಪಾರ್ಟಿ ಹಾಲ್ ಆಗಿ ಪರಿವರ್ತನೆ: ಸಾರ್ವಜನಿಕರಿಂದ ತೀವ್ರ ಆಕ್ರೋಶ!

ಸಕಲೇಶಪುರ RTO ಕಚೇರಿ ಪಾರ್ಟಿ ಹಾಲ್ ಆಗಿ ಪರಿವರ್ತನೆ: ಸಾರ್ವಜನಿಕರಿಂದ ತೀವ್ರ ಆಕ್ರೋಶ!

ಸಕಲೇಶಪುರ: ಸಕಲೇಶಪುರದಲ್ಲಿರುವ RTO ಕಚೇರಿ ಪಾರ್ಟಿ ಹಾಲ್ ಆಗಿ ಪರಿವರ್ತನೆಗೊಂಡಿದ್ದು ಬ್ರೋಕರ್ ಮೋಹನ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಹೀಗಾಗಿ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ವ್ಯಾಪಕ ಆಕ್ರೋಶ ಉಂಟಾಗಿದೆ.

ಹೌದು.. ಸಕಲೇಶಪುರದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ , ಇದು ಸರ್ಕಾರಿ ಕೆಲಸಗಳಿಗೆ ಬಳಕೆಯಾಗಬೇಕಿದ್ದಿದ್ದು ಆದರೆ ಈಗ ಖಾಸಗಿ ವ್ಯಕ್ತಿಗಳ ಹುಟ್ಟುಹಬ್ಬದ ಆಚರಣೆಗೂ ಬಳಕೆಯಾಗುತ್ತಿದ್ದು ಎಷ್ಟು ಸರಿ ಎಂಬುದೇ ಜನರ ವಾದವಾಗಿದೆ.

RTO ಬ್ರೋಕರ್ ಮೋಹನ್ ಹುಟ್ಟುಹಬ್ಬವನ್ನು ಕಚೇರಿಯೊಳಗೆ ಮಾಡಲು ಅಧಿಕಾರಿಗಳು ಅವಕಾಶ ಕಲ್ಪಿಸಿದ್ದು ಹಾಗೆ ಬ್ರೋಕರ್ ಮೋಹನ್ ಸಂಘಟನೆಯೊಂದರ ಮುಖಂಡರಾಗಿದ್ದು ಈ ಆಚರಣೆಯಲ್ಲಿRTO, ARTO ಸೇರಿದಂತೆ ಕಚೇರಿ ಸಿಬ್ಬಂದಿಗಳು ಭಾಗಿಯಾಗಿದ್ದಲ್ಲದೇ ಕಚೇರಿ ಒಳಗೆ ಬಿರಿಯಾನಿ ಪಾರ್ಟಿ ಮಾಡಿರುವ ಅಧಿಕಾರಿಗಳು.

ಈ ರೀತಿ ನಡೆದುಕೊಳ್ಳುತ್ತಿರುವ ಅಧಿಕಾರಿಗಳ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ಉಂಟಾಗಿದ್ದುಕೂಡಲೇ ಕಚೇರಿಯ ಎಲ್ಲಾ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಅಲ್ಲಿನ ಸ್ಥಳೀಯರು ಒತ್ತಾಯ ಮಾಡಲಾಗಿದೆ.

ಸರ್ಕಾರಿ ಅಧಿಕಾರಿಗಳೇ ಈ ರೀತಿ ಸರ್ಕಾರಿ ಕಚೇರಿಗಳನ್ನ ದುರುಪಯೋಗ ಮಾಡಿಕೊಂಡಿದ್ದು ಎಷ್ಟು ಸರಿ ಹಾಗಾಗಿ ಅಲ್ಲಿನ ಜಿಲ್ಲಾಡಳಿತ ಇದನ್ನ ಗಮನಿಸಿ ಏನು ಕ್ರಮ ಕೈಗೊಳ್ಳುತ್ತೆ ಎಂದು ಕಾದುನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!