ಹಾಸನ : ಹಗಲು ಇರುಳು ಸಾರಿಗೆ ನೌಕರರು ಉತ್ತಮ ಕೆಲಸ ಮಾಡುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ ಸಾರಿಗೆ ನೌಕರರ ಬೇಡಿಕೆ ಈಡೇರಿಸಲಿ ಎಂದು ಸಕಲೇಶಪುರದಲ್ಲಿ ಶಾಸಕ ಸಿಮೆಂಟ್ ಮಂಜು ಹೇಳಿದ್ದಾರೆ.
ನಾಳೆಯಿಂದ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಕಷ್ಟ ಬೇರೆಯವರಿಗಿಂತ ಭಿನ್ನವಾಗಿರುತ್ತೆ ನಾನೂ ಸಾರಿಗೆ ನೌಕರನ ಮಗ ನಮ್ಮ ತಂದೆ 30 ವರ್ಷ ಸೇವೆ ಸಲ್ಲಿಸಿದ್ದಾರೆ ಹಗಲು ಇರುಳು ಸಾರಿಗೆ ನೌಕರರು ಉತ್ತಮ ಕೆಲಸ ಮಾಡುತ್ತಿದ್ದಾರೆ ಶಕ್ತಿ ಯೋಜನೆ ಬಳಿಕ ಜನರ ಓಡಾಟ ಜಾಸ್ತಿ ಇದ್ದು ಕೆಲಸದ ಒತ್ತಡ ಕೂಡ ಹೆಚ್ಚಾಗಿದೆ ಹಾಗಾಗಿ ನೌಕರರ ಬೇಡಿಕೆ ಈಡೇರಿಸಬೇಕು ಎಂದರು.
ಹಾಗೆ ಕೋರ್ಟ್ ಒಂದು ದಿನದ ಮಟ್ಟಿಗೆ ಮುಷ್ಕರ ಮುಂದೂಡಿ ಎಂದಿದೆ ಅಷ್ಟರಲ್ಲಿ ಸರ್ಕಾರ ಹೋರಾಟಕ್ಕೆ ಸ್ಪಂದಿಸಲಿ ಅವರಿಗು ಹೆಂಡತಿ ಮಕ್ಕಳು ಇದ್ದಾರೆ ಬೆಲೆ ಏರಿಕೆ ಸಂದರ್ಭದಲ್ಲಿ ಅವರಿಗೆ ಅವರದ್ದೇ ಆದ ಕಷ್ಟ ಇದೆ ಸರ್ಕಾರ ಅವರನ್ನು ಹೆದರಿಸುವ ಕೆಲಸ ಮಾಡದೆ ಅವರನ್ನು ಪ್ರೀತಿಯಿಂದ ಕಾಣಲಿ ಅವರ ಬೇಡಿಕೆ ಈಡೇರಿಸಲಿ ಸಮಸ್ಯೆಗೆ ಸ್ಪಂದಿಸಲಿ
ಸರ್ಕಾರ ಖಾಸಗಿ ಬಸ್‌ಗಳನ್ನು ನಂಬಿಕೊಂಡು ಕೆಎಸ್‌ಆರ್‌ಟಿಸಿ ಬಸ್ ನೌಕರರು ಕೊಡುತ್ತಿರುವ ಸೇವೆಯನ್ನು ಪಡೆದುಕೊಳ್ಳುತ್ತೇನೆ ಎಂದರೆ ಖಂಡಿತವಾಗಿಯೂ ಆಗಲ್ಲ ಪ್ರಯಾಣಿಕರಿಗೆ, ರೋಗಿಗಳಿಗೆ ತೊಂದರೆ ಆಗುತ್ತದೆ ಈ ನಿಟ್ಟಿನಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸಬೇಕುಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯ ಮಾಡಿದರು.