Monday, February 9, 2026
Homeಜಿಲ್ಲಾಸುದ್ದಿನೆದರ್‌ ಲ್ಯಾಂಡ್‌ʼನಲ್ಲಿ ʼಮಿಸಸ್ ಯುನಿವರ್ಸ್‌ ಸೆಲೆಸ್ಟಿಯಲ್ 2026ʼ ಕಿರೀಟ ಗೆದ್ದ ಕಾಫಿನಾಡಿನ ಸನ್ಮತಿ ರಕ್ಷಿತ್

ನೆದರ್‌ ಲ್ಯಾಂಡ್‌ʼನಲ್ಲಿ ʼಮಿಸಸ್ ಯುನಿವರ್ಸ್‌ ಸೆಲೆಸ್ಟಿಯಲ್ 2026ʼ ಕಿರೀಟ ಗೆದ್ದ ಕಾಫಿನಾಡಿನ ಸನ್ಮತಿ ರಕ್ಷಿತ್

ಚಿಕ್ಕಮಗಳೂರು: ಮಾಡೆಲಿಂಗ್ ಕ್ಷೇತ್ರದಲ್ಲಿ ಮಲೆನಾಡಿನ ಹೆಸರು ಮತ್ತೊಮ್ಮೆ ಮೆರೆದಿದೆ‌. ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ಮೂಲದ ಸನ್ಮತಿ ರಕ್ಷಿತ್ ಮಿಸಸ್ ಯುನಿವರ್ಸ್‌ ಸೆಲೆಸ್ಟಿಯಲ್ 2026 ಕಿರೀಟವನ್ನು ಗೆದ್ದು ಮಲೆನಾಡಿಗರ ಹೆಮ್ಮೆ ಹೆಚ್ಚಿಸಿದ್ದಾರೆ.

ಕರ್ನಾಟಕ ರನ್ನರ್‌ ಅಪ್ ಆಗಿ ನಂತರ ಮಿಸ್ ಚಿಕ್ಕಮಗಳೂರು ಪ್ರಶಸ್ತಿಯ ಮೂಲಕ ಗಮನ ಸೆಳೆದಿದ್ದ ಸನ್ಮತಿ ಈಗ ಬೆಂಗಳೂರಿನಲ್ಲಿ ನಡೆದ ಮಿಸ್ ಅಂಡ್ ಮಿಸ್ಸೆಸ್ ಅಸ್ಟಲ್‌ ಪೆಜೇಂಟ್ಸ್ ಸ್ಪರ್ಧೆಯಲ್ಲಿ ವಿಜೇತ ಆಗುವ ಮೂಲಕ ದೇಶದ ಮಟ್ಟಿಗೆ ಹೆಸರು ಮಾಡಿದ್ದಾರೆ‌

ಮದುವೆ ಆದ ನಂತರ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಸನ್ಮತಿ ಸಮಾಜದ ಅನೇಕ ಮಹಿಳೆಯರಿಗೆ ಮಾದರಿಯಾಗಿ ಕನಸುಗಳನ್ನು ಸಹಕಾರಗೊಳಿಸಬಹುದು ಎಂಬ ಸಂದೇಶವನ್ನು ತಮ್ಮ ಸಾಧನೆಯ ಮೂಲಕ ತೋರಿಸಿದ್ದಾರೆ

ಇದೇ ಮೊದಲ ಬಾರಿಗೆ ಮಲೆನಾಡಿನ ಯುವತಿ ಒಬ್ಬರು ನೆದರ್ಲ್ಯಾಂಡ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವುದು ಜಿಲ್ಲೆಯವರಿಗೆ ಹೆಮ್ಮೆ ತಂದಿದೆ. ಮಾಡಲಿಂಗ್ ನನ್ನ ಆಸಕ್ತಿ ಬೆಂಬಲಿಸಿದ ಕುಟುಂಬಕ್ಕೆ ನಾನು ಚಿರಋಣಿ ಎಂದು ಸನ್ಮತಿ ರಕ್ಷಿತ್ ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!