ಕನ್ನಡ ಚಿತ್ರರಂಗದ ಮೇರುನಟಿ, ಅಭಿನಯ ಸರಸ್ವತಿ, ಹಿರಿಯ ನಟಿ ಬಿ. ಸರೋಜಾದೇವಿ ಅವರ ಅಂತ್ಯಸಂಸ್ಕಾರ ಇಂದು ಹುಟ್ಟೂರು ಚನ್ನಪಟ್ಟಣದ ದಶಾವರದಲ್ಲಿ ತಾಯಿಯ ಸಮಾಧಿ ಪಕ್ಕವೇ ನಡೆಯಲಿದೆ.

ಈ ಹಿಂದೆ, ಸರೋಜಾದೇವಿ ಬರೆದ ವ್ಹಿಲ್ ಪ್ರಕಾರ, ಗಂಡ ಹರ್ಷ ಸಮಾಧಿ ಪಕ್ಕವೇ ಕೊಡಿಗೇಹಳ್ಳಿಯ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಬೇಕಿತ್ತು. ಆದರೆ ಸರೋಜಾದೇವಿ ತೋಟದ ಪಕ್ಕ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿರುವುದರಿಂದ ಚನ್ನಪಟ್ಟಣದ ದಶಾವರದ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.
ಇಂದು ಬೆಳಗ್ಗೆ 10 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಪಾರ್ಥಿವ ಶರೀರವನ್ನು ಚನ್ನಪಟ್ಟಣದತ್ತ ಸಾಗಿಸಲಾಗುತ್ತದೆ. ಚನ್ನಪಟ್ಟಣದ ಗಾಂಧಿ ಭವನದ ಬಳಿ ಸಾರ್ವಜನಿಕ ದರ್ಶನದ ಬಳಿಕ ಹುಟ್ಟೂರಿಗೆ ತರಲಾಗುತ್ತದೆ

ಪುತ್ರ ಗೌತಮ್ ಮಾತನಾಡಿ, ಪತಿ ಪಕ್ಕದಲ್ಲೇ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ಆಸೆಯನ್ನು ಅಮ್ಮ ವ್ಯಕ್ತಪಡಿಸಿದ್ದರು. ಆದ್ರೆ ಆ ಜಾಗಈಗ ಲೇಔಟ್, ಅಪಾರ್ಟ್ಮೆಂಟ್ ಆಗಿದೆ. ಹೀಗಾಗಿ ಅಲ್ಲಿ ಅಂತ್ಯ ಸಂಸ್ಕಾರ ಮಾಡಲು ಸಾಧ್ಯವಿಲ್ಲ. ದಶವಾರ ಅವರು ಹುಟ್ಟಿದ ಜಾಗ. ಅವರ ತಾಯಿಯನ್ನು ಅಲ್ಲೇ ಮಣ್ಣು ಮಾಡಲಾಗಿದೆ. ಹಾಗಾಗಿ ಅಲ್ಲೇ ಅಂತ್ಯಕ್ರಿಯೆ ನಡೆಯಲಿದೆ ಎಂದರು.
ಮಧ್ಯಾಹ್ನ 1:30ಕ್ಕೆ ಅಂತ್ಯಸಂಸ್ಕಾರ ಕೆಲಸಗಳು ನಡೆಯಲಿವೆ. ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅಂತಿಮ ದರ್ಶನ ಪಡೆಯಲಿದ್ದಾರೆ. ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ನಿಲ್ಲಿಸಿ ಅಂತಿಮ ದರ್ಶನ ಮಾಡಿಸಲಾಗುತ್ತದೆ ಎಂದು ತಿಳಿಸಿದರು.
ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನ ನಡೆಯಲಿದ್ದು ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.