Monday, August 4, 2025
!-- afp header code starts here -->
Homeಜಿಲ್ಲಾಸುದ್ದಿ‌ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಸರಣಿ ಸಾವು ಬಹಳ ನೋವುಂಟು ಮಾಡಿದೆ: ಆರ್.‌ ಅಶೋಕ್!

‌ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಸರಣಿ ಸಾವು ಬಹಳ ನೋವುಂಟು ಮಾಡಿದೆ: ಆರ್.‌ ಅಶೋಕ್!

ಹಾಸನ : ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಸರಣಿ ಸಾವು ಬಹಳ ನೋವುಂಟು ಮಾಡಿದೆ ಎಂದು ಆಲೂರು ತಾಲೂಕಿನ ಧರ್ಮಪುರಿ ಗ್ರಾಮದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ನೀಡಿದರು

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಸರಣಿ ಸಾವು ಅಂತಾ ಹೇಳಿಕ್ಕೆ ಬಹಳ ನೋವಾಗುತ್ತಿದೆ. ಹಾಸನದಲ್ಲಿ ಪದೇ ಪದೇ ಹೀಗೆ ಆಗುತ್ತಿದೆ ಅದಕ್ಕೆ ಮುಖ್ಯಮಂತ್ರಿಗಳು ಕೂಡ ರಿಯಾಕ್ಷನ್ ಕೊಟ್ಟಿದ್ದಾರೆ ಆದ್ರೆ ಅವರು ಕೋವಿಡ್ ಲಸಿಕೆಯಿಂದ ಆಗ್ತಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ ಆದರೆ ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಈ ತರಹ ಹೇಳಿಕೆ ಕೊಟ್ಟು ನಗೆ ಪಾಟಲಿಗೆ ಈಡಾಗಿದ್ದಾರೆ ಕೋವಿಡ್ ಲಸಿಕೆ ಬಗ್ಗೆ ರಿಪೋರ್ಟ್ ಬಂದಿದೆ, ದೆಹಲಿಯ ಆರೋಗ್ಯ ಇಲಾಖೆ ಕೊಟ್ಟಿದೆ ಜಯದೇವ ಆಸ್ಪತ್ರೆಯವರು ಸಹ ರಿಪೋರ್ಟ್ ಕೊಟ್ಟಿದ್ದಾರೆ ಅದನ್ನು ಮುಚ್ಚಿಹಾಕಿಕೊಂಡಿದ್ದಾರೆ ಕೋವಿಡ್ ಲಸಿಕೆಯಿಂದ ಹಾಸನದಲ್ಲಿ ಮಾತ್ರ ಸಾವು ಆಗುತ್ತಾ ಎಲ್ಲಾ ಕಡೆ ಕೋವಿಡ್ ಲಸಿಕೆ ಕೊಟ್ಟಿದ್ದಾರೆ ಬರೀ ಹಾಸನದಲ್ಲಿ ಯಾಕೆ ಆಗುತ್ತಿದೆಇದಕ್ಕೆ ಬೇರೆಯೇ ಕಾರಣ ಇದೆಇದಕ್ಕೆ ಏನಾದರೂ ಕಾರಣ ಇರಬೇಕು ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಆರ್‌ ಅಶೋಕ್‌ ಕಿಡಿಕಾರಿದ್ದಾರೆ.

ಹಾಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಸನಕ್ಕೆ ಬಾರದೆ ಅಲ್ಲಿಂದ ಅಲ್ಲೇ ಹೋಗಿದ್ದಾರೆಹಿರಿಯ ಮಂತ್ರಿಗಳು, ಅಧಿಕಾರಿಗಳು ಬಂದರೆ ಅದಕ್ಕೊಂದು ಪರಿಹಾರ ಸಿಗುತ್ತೆ ಹೃದಯಾಘಾತಕ್ಕೆ ನಿಜವಾದ ಕಾರಣವೇನು ಅಂತ ತಿಳಿಯುತ್ತೆಜನ ಸಾಯುತ್ತಿದ್ದಾರೆ, ಏನಾದರೂ ಕಾರಣ ಇದ್ದೇ ಇರುತ್ತೆಸರ್ಕಾರ ಆ ಕಾರಣ ಏನು ಅಂತ ಹುಡುಕಬೇಕುಸರ್ಕಾರ ಎಚ್ಚರ ತಪ್ಪಿದೆ, ಕೋಮಾ ಸ್ಟೇಜ್‌ನಲ್ಲಿ ಇದೆ ಅವರಿಗೆ ಅಧಿಕಾರ ಹಸ್ತಾಂತರ, ಯಾರು ಮುಂದೆ ಮುಖ್ಯಮಂತ್ರಿ ಆಗಬೇಕು ಎಟಿಎಂ ತಗೊಂಡು ದೆಹಲಿಗೆ ಯಾರ್ಯಾರು ಎಷ್ಟೆಷ್ಟು ಕೊಡಬೇಕು ಎಂಬುದರಲ್ಲೇ ಇಡೀ ಸರ್ಕಾರ ಮುಳುಗಿದೆ, ಹಾಗಾಗಿ ಜನರು ಕಂಗಾಲಾಗಿದ್ದಾರೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!