ಚಿಕ್ಕಮಗಳೂರು/ ಕೊಪ್ಪ: ಮೊರಾರ್ಜಿ ವಸತಿ ಶಾಲಾ ವಿದ್ಯಾರ್ಥಿ ಶಮಿತಾ ಅನುಮಾನಾಸ್ಪದ ಸಾವು ಹಿನ್ನೆಲೆಯಲ್ಲಿ ಎವಿವಿಪಿ ವಿದ್ಯಾರ್ಥಿಗಳಿಂದ ಬೃಹತ್ ಮೆರವಣಿಗೆ ಆರಂಭಗೊಂಡಿದ್ದು ಮಳೆಯನ್ನೂ ಲೆಕ್ಕಿಸದೇ ವಿದ್ಯಾರ್ಥಿನಿ ಪರವಾಗಿ ಘೋಷಣೆಗಳನ್ನು ಕೂಗುತ್ತಾ ನ್ಯಾಯ ಕೇಳುತ್ತಿದ್ದಾರೆ.
ಹೌದು .. ಕೊಪ್ಪದ ಬಸ್ ಸ್ಟ್ಯಾಂಡ್ ಎದುರು ಬೃಹತ್ ಮೆರವಣಿಗೆ ಆರಂಭಗೊಳಿಸಿದ ವಿದ್ಯಾರ್ಥಿಗಳು ಮಳೆಯನ್ನೂ ಲೆಕ್ಕಿಸದೇ ತಮ್ಮ ಘೋಷಣೆಗಳ ಮೂಲಕ ಬೃಹತ್ ಜಾಥಾದಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ.

ಜೂನ್ 28ರಂದು ಕೊಪ್ಪದ ಮುರಾರ್ಜಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತಿದ್ದ ವಿದ್ಯಾರ್ಥಿನಿ ಶಮಿತಾ ಆತ್ಮಹತ್ಯೆಗೆ ಶರಣಾಗಿದ್ದು ಆದರೆ ಇದರ ಸುತ್ತ ಹಲವಾರು ಅನುಮಾನಗಳಿದ್ದು ಹಾಗೆ ಆಡಳಿತ ಮಂಡಳಿಯು ಈ ವಿಷಯದಲ್ಲಿ ನಡೆದುಕೊಂಡ ರೀತಿ ಕೂಡ ಅನುಮಾನ ಹುಟ್ಟಿಸುವಂತಿತ್ತು.

ನಂತರ ವಿದ್ಯಾರ್ಥಿಗಳು ಹಿಂಸೆಯ ರೀತಿಯಲ್ಲಿ ಓದುವ ಪರಿಸ್ಥಿತಿ ಬಂದಿದೆ ಆದುದರಿಂದ ಈ ಪ್ರಕರಣದಲ್ಲಿ ಸೂಕ್ತ ತನಿಖೆಯಾಗಬೇಕು ಮತ್ತು ಆ ಮುರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮೂಲಸೌಕರ್ಯಗಳು ಸಿಗಬೇಕು ಮತ್ತು ಅಮೂಲ್ಯ ಮತ್ತು ಶಮಿತ ಸಾವಿಗೆ ಸೂಕ್ತ ತನಿಖೆ ನಡೆದು ನ್ಯಾಯ ಸಿಗಬೇಕೆಂದು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿಕ್ಕಮಗಳೂರು ಜಿಲ್ಲಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.