Sunday, March 29, 2026
Homeಜಿಲ್ಲಾಸುದ್ದಿಚಿಕ್ಕಮಗಳೂರಿಗೆ ಶರಣ್‌ ಪಂಪ್‌ ವೆಲ್‌ ನಿರ್ಬಂಧ : ಹಿಂದೂ ಪರ ಸಂಘಟನೆ ಮುಖಂಡರಿಂದ ಪ್ರತಿಭಟನೆ!

ಚಿಕ್ಕಮಗಳೂರಿಗೆ ಶರಣ್‌ ಪಂಪ್‌ ವೆಲ್‌ ನಿರ್ಬಂಧ : ಹಿಂದೂ ಪರ ಸಂಘಟನೆ ಮುಖಂಡರಿಂದ ಪ್ರತಿಭಟನೆ!

ಚಿಕ್ಕಮಗಳೂರು : ಹಿಂದೂ ಪರ ಸಂಘಟನೆಯ ಮುಖಂಡ ಶರಣ ಪಂಪ್‌ ವೆಲ್ ಅವರನ್ನು ಒಂದು ತಿಂಗಳು ಚಿಕ್ಕಮಗಳೂರು ಜಿಲ್ಲೆಗೆ ಬರದಂತೆ ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿ ಹಿಂದೂ ಪರ ಸಂಘಟನೆ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹೀಗಾಗಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸುತ್ತಮುತ್ತ ಬಾರಿ ಬಿಗಿ ಭದ್ರತೆ ಒದಗಿಸಲಾಗಿದ್ದು ಜಿಲ್ಲಾಧಿಕಾರಿ ಕಚೇರಿ ಹಾಗೂ ಎಸ್ ಪಿ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಸದ್ಯ ಬಿಗಿ ಭದ್ರತೆ ಒದಗಿಸಿರುವುದರಿಂದ ಸಾರ್ವಜನಿಕರಿಗೂ ಡಿಸಿ ಎಸ್ ಪಿ ಕಚೇರಿ ಪ್ರವೇಶ ನಿರ್ಬಂಧಿಸಲಾಗಿದೆ

ಜುಲೈ 6ರಿಂದ ಆಗಸ್ಟ್ 4ರವರೆಗೆ 30 ದಿನಗಳ ಕಾಲ ಜಿಲ್ಲೆಗೆ ನಿರ್ಬಂಧ ವಿಧಿಸಲಾಗಿದೆ. ಶರಣ್‌ ಪಂಪ್‌ ವೆಲ್‌ ವಿರುದ್ಧ 22 ಮೂಡಿಗೆರೆ, ಆಲ್ದೂರಿನಲ್ಲಿ ಅವರ ಬೈಠಕ್ ಹಮ್ಮಿಕೊಳ್ಳಲಾಗಿತ್ತು ಹಾಗಾಗಿ ಈ ರೀತಿ ನಿರ್ಬಂಧ ಹೇರಲಾಗಿದೆ.

ಅಷ್ಟೇ ಅಲ್ಲದೇ ಶರಣ್ ಬಲಪಂಥೀಯ ನಿಲುವಿನಿಂದ ಪ್ರಭಾವಿತರಾಗಿದ್ದು ಕೋಮು ದ್ವೇಷ ಹರಡುವ ಭಾಷಣ ಮಾಡುವ ಪ್ರವೃತ್ತಿ ಉಳ್ಳವರಾಗಿದ್ದಾರೆ ಹೀಗಾಗಿ ಇವರ ಪ್ರಚೋದನೆ ಭಾಷಣದಿಂದ ಗಲಾಟೆ ಗುಂಪು ಘರ್ಷಣೆಗಳಾಗುವ ಸಾಧ್ಯತೆ ಉಂಟಾಗಬಹುದು ಹಾಗೆ ಚಿಕ್ಕಮಗಳೂರು ಸೇರಿ ಕೆಲವು ಪಟ್ಟಣಗಳು ಸೂಕ್ಷ್ಮ ಪ್ರದೇಶವಾಗಿದೆ ಹಾಗೆ ಜಿಲ್ಲೆಯ ಕಾನೂನ ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಗಳಿರುವುದರಿಂದ ನಿಷೇಧಿಸಿ ಎಂದು ಡಿಸಿ ಮೀನಾ ನಾಗರಾಜ್ ಅವರು ಭಾನುವಾರ ಆದೇಶ ನೀಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!