ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಓರ್ವ ವೈದ್ಯರೂ ಇಲ್ಲದೆ ಜನರು ಚಿಕಿತ್ಸೆಗೆ ಪರದಾಡುವಂತ ಸ್ಥಿತಿ ಒದಗಿಬಂದಿದೆ.
ಸುತ್ತಮುತ್ತಲಿನ ಗ್ರಾಮಸ್ಥರು ಸಾವು-ಬದುಕಿನ ಹೋರಾಡಿಕೊಂಡು ಆಸ್ಪತ್ರೆಗೆ ಬಂದರೆ ವೈದ್ಯರೇ ಸಿಗುವುದಿಲ್ಲ.ಕಾರಣ ತಾಲೂಕು ಆಸ್ಪತ್ರೆಯಲ್ಲಿ ಖಾಯಂ ವೈದ್ಯರ ಕೊರತೆ ಉಂಟಾಗಿದೆ.ಆಸ್ಪತ್ರೆಗೆ ಬಂದು ಸಾವನ್ನಪ್ಪಿದರೆ ವ್ಯಕ್ತಿಯ ಮರಣೋತ್ತರ ಪರೀಕ್ಷೆಗೆ ವೈದ್ಯರಿಲ್ಲದಂತಾಗಿದೆ.
ಮರಣೋತ್ತರ ಪರೀಕ್ಷೆಯೂ ಇಲ್ಲದೆ, ಅನಾರೋಗ್ಯದಿಂದ ಮೃತಪಟ್ಟಿದ್ದ ಹೊರನಾಡು ವ್ಯಕ್ತಿಯ ಶವನ್ನು ಆಸ್ಪತ್ರೆಯಲ್ಲಿಡಲಾಗಿತ್ತು. ಮಧ್ಯಾಹ್ನದವರೆಗೂ ಕಾದುಕುಳಿತರು ವೈದ್ಯರಿಲ್ಲದ ಕಾರಣಕ್ಕೆ ಮೃತದೇಹವನ್ನ ಸಂಬಂಧಿಕರು ಮನೆಗೆ ಕೊಂಡೊಯ್ದ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲದೆ ರೋಗಿಗಳ ಪರದಾಡುವಂತಾಗಿದ್ದು, ಖಾಯಂ ವೈದ್ಯರಿಗೆ ಒತ್ತಾಯಿಸಿ ಈ ಹಿಂದೆ ಸಾರ್ವಜನಿಕರು ಪ್ರತಿಭಟನೆಯನ್ನು ನಡೆಸಿದ್ದರು. ಬಳಿಕ ಈ ಕ್ಷೇತ್ರದ ಶಾಸಕಿ ನಯನ ಅವರಿಗೂ ಮನವಿ ನಲ್ಲಿಸಿದ್ದರು.
ಕಳಸ ತಾಲೂಕಿನ ಜನರು ಸಣ್ಣ-ಪುಟ್ಟ ಚಿಕಿತ್ಸೆಗೂ ಬೇರೆ ತಾಲೂಕಿಗೆ ಹೋಗಬೇಕಾದ ದುಸ್ಥಿತಿ ಎದುರಾಗಿದೆ.ಹೆರಿಗೆಗೆ ಬಂದವರು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಬೇರೆಕಡೆಗೆ ಹೋಗಬೇಕಾಗಿದೆ. ಈ ವಿಷಯ ಶಾಸಕರಿಗೆ ತಿಳಿದಿದ್ದರೂ ಖಾಯಂ ವೈದ್ಯರ ನೇಮಿಸಲು ಮುಂದಾಗಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಸಿದ್ದಾರೆ.