ಚಿಕ್ಕಮಗಳೂರು: ವಿಧಾನಪರಿಷತ್ ಸದಸ್ಯ, ಜೆಡಿಎಸ್ ನ ಹಿರಿಯ ನಾಯಕ ಎಸ್.ಎಲ್ ಭೋಜೇಗೌಡರು ಇಂದು ತಮ್ಮ 68ನೇ ಹುಟ್ಟುಹಬ್ಬವನ್ನ ಸರಳವಾಗಿ, ಅರ್ಥಪೂರ್ಣವಾಗಿ ಪೌರ ಕಾರ್ಮಿಕರ ಜೊತೆ ಆಚರಿಸಿಕೊಂಡರು.

ಚಿಕ್ಕಮಗಳೂರು ನಗರದಲ್ಲಿರೋ ಬೋಳರಾಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪೌರ ಕಾರ್ಮಿಕರಿಗೆ ಹಾರ ಹಾಕಿ ಸನ್ಮಾನ ಮಾಡೋ ಮೂಲಕ ಸ್ಮರಣೀಯವಾಗಿಸಿಕೊಂಡರು. ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರವಹಿಸೋ ಪೌರ ಕಾರ್ಮಿಕರೇ ನಿಜವಾದ ಹೀರೋಗಳು, ಹೀಗಾಗಿ ಅವರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಖುಷಿ ತಂದಿದೆ ಎಂದರು.

ಚಿಕ್ಕಮಗಳೂರು ನಗರದ ಸ್ವಚ್ಛತೆಗೆ ಆದ್ಯತೆ ಕೊಟ್ಟು ಕೆಲಸ ಮಾಡ್ತಿರೋ ನಗರಸಭೆಯ ಹೆಗಲಿಗೆ ಹೆಗಲು ಕೊಟ್ಟು ಮಾರ್ಗ ದರ್ಶನ ಮಾಡ್ತಿರೋದು ಇದೇ ಭೋಜೇಗೌಡರು. ಫುಟ್ ಪಾತ್ ತೆರವು ಕಾರ್ಯ ಸೇರಿ ಅನೇಕ ಪರಿಣಾಮಕಾರಿ ಕೆಲಸಕ್ಕೆ ಕೈ ಹಾಕಿರೋ ಭೋಜೇಗೌಡರ ಕಾರ್ಯಕ್ಕೆ ಜನಸಾಮಾನ್ಯರಿಂದ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ಹೀಗಾಗಿ ಇದೇ ರೀತಿಯ ಜನಪಯೋಗಿ ಕೆಲಸಗಳನ್ನ ಮುಂದುವರೆಸುವುದಾಗಿ ಭೋಜೇಗೌಡರು ಹೇಳಿದ್ದಾರೆ.