ಚಿಕ್ಕಮಗಳೂರು: ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಅವರ ಪತ್ನಿ ಪುಷ್ಪ ಹಾಗೂ ಪುತ್ರ ಅರ್ಪಿತ್ ರಾಜ್ ದೇವ್ ವಿರುದ್ಧ ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಾಗಿದೆ. ಚಿಕ್ಕಮಗಳೂರು ಮತ್ತು ಹಾಸನ ಲೋಕಾಯುಕ್ತ ಎಸ್ಪಿ ಕಚೇರಿ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಮೇರೆಗೆ ಎಫ್ ಐಆರ್ ದಾಖಲಾಗಿದ್ದು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಲಾಗಿದೆ

ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ರಾಜೇಗೌಡರ ವಿರುದ್ಧ ದಿನೇಶ್ ಎಂಬುವವರು ದೂರು ಸಲ್ಲಿಸಿದ್ದರು ಆದರೆ ತನಿಖೆ ಮಾಡದೇ ಬಿ ರಿಪೋರ್ಟ್ ಸಲ್ಲಿಸಿದ್ದ ಲೋಕಾ ಪೊಲೀಸರು ಈ ಹಿನ್ನೆಲೆಯಲ್ಲಿ ಮತ್ತೆ ಕೋರ್ಟ್ ಮೆಟ್ಟಿಲೇರಿದ ದಿನೇಶ್
ಕಳೆದ ವಾರ ಮತ್ತೆ ತನಿಖೆ ಮಾಡುವಂತೆ ಸೂಚಿಸಿದ್ದ ನ್ಯಾಯಾಧೀಶರು ಈನೆ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಎಫ್‌ಐಆರ್ ದಾಖಲು ಆಗಿದೆ.
ರಾಜೇಗೌಡರ ಪತ್ನಿ ಪುಷ್ಪಾ, ಪುತ್ರ ರಾಜ್ ದೇವ್ ವಿರುದ್ಧವೂ ಎಫ್‌ಐಆರ್ ದಾಖಲಾಗಿದ್ದು ಅಕ್ರಮ ಆದಾಯ ಭ್ರಷ್ಟಾಚಾರ ಮತ್ತು ಬ್ಯಾಂಕ್ ಸಾಲವನ್ನು ಮರೆಮಾಚಲಾಗಿದೆ ಎಂಬ ಗಂಭೀರ ಇವರ ಮೇಲಿದ್ದು ಆದಾಯ ತೆರಿಗೆ ವಂಚನೆ ಆರೋಪದಡಿ ದೂರು ದಾಖಲಾಗಿದೆ. ಈ ಬೆಳವಣಿಗೆ ಶೃಂಗೇರಿ ಕ್ಷೇತ್ರದಲ್ಲಿ ರಾಜಕೀಯ ಕುತೂಹಲ ಹುಟ್ಟಿಸಿದೆ
