ಶೃಂಗೇರಿ: ಅಡಿಕೆ ಬೆಳೆ ಸಾಲಕ್ಕೆ ಸಂಬಂಧಿಸಿದಂತೆ ನೋಂದಣಿ ಶುಲ್ಕ ಮತ್ತು ಸ್ಟ್ಯಾಂಪ್ ಡ್ಯೂಟಿ ವಿಧಿಸುತ್ತಿರುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ತಹಸೀಲ್ದಾರ್ ಅನೂಪ್ ಸಂಜೋಗ್ಗೆ ಮನವಿ ಸಲ್ಲಿಸಿದರು.

ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಇದರಿಂದ ತೊಂದರೆಯಾಗುತ್ತಿದೆ. ಕೂಡಲೇ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.

ಜಮೀನುಗಳ ಆಧಾರದಲ್ಲಿ ಬೆಳೆ ಸಾಲ ಪಡೆಯುವಾಗ ಪಹಣಿ ದಾಖಲೆಯ ಒಂಬತ್ತನೇ ಕಾಲಂನಲ್ಲಿ ಬೆಳೆ ಹೆಸರು ಅಡಕೆ ಎಂದು ನಮೂದಿಸಲಾಗಿದೆ. 15ನೇ ಕಾಲಂನಲ್ಲಿ ಕಾಳುಮೆಣಸು, ಕಾಫಿ ಬೆಳೆಗಳು ಇರುವುದರಿಂದ ಸಂಬಂಧಪಟ್ಟ ಉಪನೋಂದಣಿ ಕಚೇರಿಯಲ್ಲಿ ಆಧಾರಪತ್ರ, ಫಾರ್ಮ್ ನಂ.3 ನೋಂದಣಿ ಮಾಡುವಾಗ ಒಂದು ಲಕ್ಷ ರೂ. ಬೆಳೆ ಸಾಲಕ್ಕೆ 1015 ರೂ. ನೋಂದಣಿ ಶುಲ್ಕ ಮತ್ತು ಸ್ಟ್ಯಾಂಪ್ ಡ್ಯೂಟಿ ವಿಧಿಸುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ವಿಠಲ್ ಶೃಂಗೇರಿ
7676798969
