Friday, March 27, 2026
Homeಕ್ರೈಮ್ಶೃಂಗೇರಿ: ಷೇರು ಮಾರ್ಕೆಟ್ ಬಗ್ಗೆ ಇರಲಿ ಎಚ್ಚರಿಕೆ: 72 ವರ್ಷದ ವ್ಯಕ್ತಿಗೆ 3 ಕೋಟಿ 27 ಲಕ್ಷ ರೂ...

ಶೃಂಗೇರಿ: ಷೇರು ಮಾರ್ಕೆಟ್ ಬಗ್ಗೆ ಇರಲಿ ಎಚ್ಚರಿಕೆ: 72 ವರ್ಷದ ವ್ಯಕ್ತಿಗೆ 3 ಕೋಟಿ 27 ಲಕ್ಷ ರೂ ವಂಚನೆ!

ಶೃಂಗೇರಿ: ಚಿಕ್ಕಮಗಳೂರಿನಲ್ಲಿ ಆನ್‌ಲೈನ್ ಷೇರು ಮಾರ್ಕೆಟ್ ವಂಚನೆ ಬೆಳಕಿಗೆ ಬಂದಿದೆ. ಷೇರು ಮಾರ್ಕೆಟ್ ಹೆಸರಲ್ಲಿ ವಾಟ್ಸಾಪ್ ಲೋಗೋ ಬಳಸಿ 72 ವರ್ಷದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 3 ಕೋಟಿ 27 ಲಕ್ಷ ರೂ ವಂಚಿಸಿರುವ ಘಟನೆ ನಡೆದಿದೆ.

ಹೌದು .. ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಹೆಸರಲ್ಲಿ ನಕಲಿ ಖಾತೆ ತೆರೆದು ಶೃಂಗೇರಿ ಮೂಲದ ಶಂಕರ್ ನಟರಾಜನ್ ಎಂಬುವವರಿಗೆ ವಂಚಿಸಿದ್ದಾರೆ.

ಖದೀಮರು ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಹೆಸರಲ್ಲಿ ನಕಲಿ ಖಾತೆಯೊಂದು ತೆರೆದಿದ್ದಾರೆ. ಬಳಿಕ ವಾಟ್ಸಾಪ್​​ನಲ್ಲಿ ಬಂದ ಲೋಗೋ ನಂಬಿ ಶಂಕರ್ ನಟರಾಜನ್ ಮೋಸ ಹೋಗಿದ್ದಾರೆ. ನೀವು ‌ ಹೂಡಿಕೆ ಮಾಡಿದ ಹಣ ಲಾಭ ಬಂದಿದೆ. ನಿಮ್ಮ ಖಾತೆಯಲ್ಲಿ 9 ಕೋಟಿ ರೂ ಹಣವಿದ್ದು ಅದನ್ನ ಪಡೆಯಲು 1 ಕೋಟಿ 9 ಲಕ್ಷ ರೂ ಕಮಿಷನ್ ಹಾಕುವಂತೆ ವಂಚಕರು ಬೇಡಿಕೆ ಇಟ್ಟಿದ್ದಾರೆ. ನಂತರ ಹಂತ ಹಂತವಾಗಿ 3 ಕೋಟಿ‌ 27 ಲಕ್ಷ ರೂ. ಹಣ ಹಾಕಿಸಿಕೊಂಡು ವಂಚಿಸಿದ್ದಾರೆ. ಮಹಾರಾಷ್ಟ್ರದ ಇಂಡಿಯನ್ ಸ್ಟಾಕ್ ರಿಲಯನ್ಸ್​​ ಸೆಕ್ಯೂರಿಟೀಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ವೇಳೆ ವಂಚನೆ ಬಯಲಾಗಿದೆ.

ಘಟನೆ ಸಂಬಂಧ ಚಿಕ್ಕಮಗಳೂರು ಸೈಬರ್ ಠಾಣೆಯಲ್ಲಿ ಎಫ್​​ಐಆರ್​​ ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!