Wednesday, March 25, 2026
Homeಕ್ರೈಮ್ಶೃಂಗೇರಿ: ಮನೆ ಸಮೀಪ ಯುವಕನ ಶವ ಪತ್ತೆ: ಆತ್ಮಹತ್ಯೆಯೋ/ ಕೊಲೆ ಅನುಮಾನ?!

ಶೃಂಗೇರಿ: ಮನೆ ಸಮೀಪ ಯುವಕನ ಶವ ಪತ್ತೆ: ಆತ್ಮಹತ್ಯೆಯೋ/ ಕೊಲೆ ಅನುಮಾನ?!

ಶೃಂಗೇರಿ: ಮನೆ ಸಮೀಪ ಕೊಟ್ಟಿಗೆ ಪಕ್ಕದಲ್ಲಿ ಯುವಕನ ಶವ ಪತ್ತೆಯಾಗಿರುವ ಘಟನೆ ತಾಲೂಕಿನ ವಿದ್ಯಾರಣ್ಯಪುರದಲ್ಲಿ ಕಂಡುಬಂದಿದೆ. ಇದೊಂದು ಆತ್ಮಹತ್ಯೆಯೋ ಅಥವಾ ಯಾರಾದರೂ ಕೊಲೆ ಮಾಡಿದ್ದಾರೋ ಎಂಬುದು ಅನುಮಾನ ವ್ಯಕ್ತವಾಗಿದೆ.

ಹೌದು ..ತಾಲೂಕಿನ ವಿದ್ಯಾರಣ್ಯಪುರದ ಫೋಟೋಗ್ರಾಫರ್ ಅಶ್ವಥ್ ಆಚಾರ್ಯ (30) ಮೃತ ಯುವಕ. ಮನೆ ಸಮೀಪ ಕೊಟ್ಟಿಗೆ ಪಕ್ಕದಲ್ಲಿ ಶವ ಪತ್ತೆಯಾಗಿದ್ದು ಮರಣೋತ್ತರ ಪರೀಕ್ಷೆಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಬೆಳಗ್ಗೆ ಅಶ್ವತ್ಥ್‌ ತಾಯಿ ಸೌದೆ ತರಲು ಕೊಟ್ಟಿಗೆಗೆ ಹೋದಾಗ ಪಕದಲ್ಲಿ ಮಗನ ಶವ ಪತ್ತೆಯಾಗಿದೆ. ಇದು ಕೊಲೆಯೋ ಅಥವಾ ಅತ್ಮಹತ್ಯೆಯೋ ಅಥವಾ ಬೆಟ್ಟಿಂಗ್‌ ಆಪ್‌ ನಲ್ಲಿ ಸಿಲುಕಿಕೊಂಡಿದ್ನಾ ಎಂದು ಪೋಲೀಸರ ತನಿಖೆ ಬಳಿಕ ತಿಳಿದುಬರಬೇಕಿದೆ.

ಅಶ್ವತ್ ಮೃದು ಸ್ವಭಾವಾದ ಯುವಕನಾಗಿದ್ದು ಯಾರೊಂದಿಗೂ ದ್ವೇಷ ಕಟ್ಟಿಕೊಂಡವನಲ್ಲ. ಆನ್ಲೈನ್ ಫೈನಾನ್ಸ್‌ ಆಪ್ ನಲ್ಲಿ ಸಾಲ ಮಾಡಿಕೊಂಡಿದ್ದ.  ಇದರಿಂದ ಮಾನಸಿಕವಾಗಿ ನೊಂದಿದ್ದ ಎಂಬುದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!