ಚಿಕ್ಕಮಗಳೂರು: ಮಲೆನಾಡಿನಲ್ಲಿ ಬಿಟ್ಟು ಬಿಡದೇ ಕಾಡುತ್ತಿರುವ ಮಳೆಗೆ ದಿನಕ್ಕೊಂದು ಅವಂತರಗಳು ಸೃಷ್ಟಿಯಾಗುತ್ತಲೇ ಇದೆ. ಆ ಮಳೆಗೆ ಜನರು ಯಾವಕಡೆ ಏನು ಅನಾಹುತಾ ಆಗುತ್ತಾ ಅಂತಾ ನೋಡುವುದೇ ಅವರ ಒಂದು ರೀತಿಯ ಕಾಯಕವಾಗಿ ಬಿಟ್ಟಿದೆ. ಅದೇ ರೀತಿ ಧರೆ ಕುಸಿದು ಮೂರು ಹಸುಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದು ಮನೆಗೂ ಹಾನಿ ಸಂಭವಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮರ್ಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಕಂಡು ಬಂದಿದೆ.

ಮಾಗೋಡಿನ ಶಂಕರಪ್ಪಗೌಡರ ಮನೆ ಸಮೀಪದ ಧರೆ ಕುಸಿದು ಮೂರು ಹಸುಗಳು ಸ್ಥಳದಲ್ಲಿ ಮೃತಪಟ್ಟಿದ್ದು ಮನೆಗೂ ಹಾನಿ ಸಂಭವಿಸಿದೆ. ಭಾನುವಾರ ಘಟನೆ ಸಂಭವಿಸಿದೆ. ಭಾರಿ ಪ್ರಮಾಣದ ಮಣ್ಣು ಕೊಟ್ಟಿಗೆ ಮೇಲೆ ಬಿದ್ದು ಕೊಟ್ಟಿಗೆಯಲ್ಲಿದ್ದ ಮೂರು ಜಾನುವಾರುಗಳು, ನಾಯಿ, ಕೋಳಿ ಮತ್ತು ಬೆಕ್ಕು ಸ್ಥಳದಲ್ಲಿ ಮೃತಪಟ್ಟಿವೆ. ಮನೆಯ ಗೋಡೆ, ಮೇಲ್ಲಾವಣಿಯೂ ಕುಸಿದಿದೆ.
ಆದರೆ, ಇನ್ನೂ ಕೂಡ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.