ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿ ಸಮಿತಿಯಿಂದ ಮಾಜಿ ಗೃಹ ಸಚಿವರಾದ ಹಾಲಿ ತೀರ್ಥಳ್ಳಿ ಶಾಸಕರಾದ ಅರಗ ಜ್ಞಾನೇಂದ್ರನವರನ್ನು ಶೃಂಗೇರಿ ತಾಲೂಕು ಮಂಡಲದ ಅಧ್ಯಕ್ಷರಾದ ಉಮೇಶ್ ತಲ್ಗಾರು ನೇತೃತ್ವದಲ್ಲಿ ಭೇಟಿ ಮಾಡಿ ಸಮಸ್ಯೆ ಬಗ್ಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಹಾಲಿ ಶಾಸಕರಾದ ಅರಗ ಜ್ಞಾನೇಂದ್ರ ಅವರು ಸ್ವಕ್ಷೇತ್ರದಲ್ಲಿಯೂ ಈ ರೀತಿಯ ಸಮಸ್ಯೆ ಇದ್ದೂ ಸದನದಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅರುಣ ಕೃಷ್ಣಪ್ಪ ನಾಯಕ ಕಿರ್ ಕೋಡ್, ಧರ್ಮ ನಾಯಕ್ ಕಡಕಲ್, ಸುಬ್ರಹ್ಮಣ್ಯ ಹಾದಿ ಸುಧಾಕರ ಕಿರ್ ಕೋಡ್, ಯೋಗಪ್ಪ ಗೌಡ ಕೆಸಗೋಡ್, ವಿಜಯ ಉಡುತಾಳ್, ಸಚಿಂದ್ರ ಸುನಿಲ್, ಅರುಣ್ ಉಡುತಾಲ್ ಮುಂತಾದವರು ಹಾಜರಿದ್ದರು.
2005ರಲ್ಲಿ ಸರ್ಕಾರದಿಂದ ಅನುಮತಿ ಪಡೆಯುವಾಗ 2008ರ ವರೆಗೆ ಎಲ್ಲಾ ಕುಟುಂಬಗಳನ್ನು ಪುನರ್ ವಸತಿಗೊಳಿಸಿದಾಗ ಉಲ್ಲೇಖ ಮಾಡಿರುತ್ತಾರೆ ಆದರೆ 2025 ವರ್ಷ ಕಳೆದರೂ ಈವರೆಗೂ ಪುನರ್ವಸತಿ ಗೊಳಿಸುವ ಕಾರ್ಯ ಪೂರ್ಣಗೊಳಿಸುವುದಿಲ್ಲ. ಹಣದುಬ್ಬರದಿಂದ ಜಮೀನು ಮತ್ತು ಮನೆಗಳು ಸೇರಿದಂತೆ ಸರಕು ಸೇವೆಗಳ ಬೆಲೆಗಳು ಗಗನ ಕೇಳುತ್ತಿದ್ದ ಹಣದ ಮೌಲ್ಯಯು ಕಾಲಕಾಲಕ್ಕೆ ಏರಿಳಿತಕ್ಕೆ ಒಳಗಾಗುತ್ತಿದ್ದ ಶೇಕಡ ಐದರಿಂದ ಆರು ಪ್ರತಿಶತ ಹಣದ ಮೌಲ್ಯವು ಕಡಿಮೆಯಾಗಿರುತ್ತದೆ ಆದರೆ ಭೂಮಿಯ ಬೆಲೆಯು ನಾಲ್ಕೈದು ಪಟ್ಟು ಹೆಚ್ಚಾಗಿರುತ್ತದೆ ಈಗ ಕೊಡುತ್ತಿರುವ ಪುನರ್ವಸತಿ ಮೌಲ್ಯದಿಂದ ಅನೇಕ ಕುಟುಂಬಗಳು ಬೀದಿಯಲ್ಲಿ ಬೀಳುವ ಪರಿಸ್ಥಿತಿಯಲ್ಲಿದ್ದಾರೆ ಕಾರಣ ಸರ್ಕಾರ ಜಾಗವನ್ನು ಸಹ ನೀಡುತ್ತಿಲ್ಲ ಹಾಗೂ ಸರ್ಕಾರ ನೀಡುತ್ತಿರುವ ಪುನರ್ವಸತಿ ಯೋಜನೆ ಅಡಿ ನೀರು ಹಣದಿಂದ ಬೇರೆ ಜಮೀನು ಮನೆಗಳನ್ನು ಕೊಳ್ಳಲು ಆಗುವುದಿಲ್ಲ ಆದ್ದರಿಂದ ಸರ್ಕಾರ ಯೋಜನೆಗಾಗಿ ಮೂಲ ನಿವಾಸಿಗಳು ತಾವು ಕಟ್ಟಿಕೊಂಡ ಬದುಕನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟು ದಿಕ್ಕು ದೆಸೆ ಇಲ್ಲದೆ ಬಿಟ್ಟು ಹೋಗುವ ಪರಿಸ್ಥಿತಿ ಮತ್ತು ಸರ್ಕಾರ ಕೊಡುವ ಹಣ ನೆಲೆ ನಿಲ್ಲಲು ಸಾಕಾಗದೆ ಬೀದಿಯಲ್ಲಿ ಬೀಳುವ ಪರಿಸ್ಥಿತಿ ಒದಾಗಿ ಬಂದಿದೆ
ಆದ್ದರಿಂದ ಪುನರ್ ವಸತಿ ಪ್ಯಾಕೇಜ್ ನಲ್ಲಿ ಘೋಷಿಸಿರುವ ಎಲ್ಲಾ ಮೌಲ್ಯಗಳನ್ನು 2025 ಮಾರ್ಕೆಟ್ ದರಕ್ಕೆ ಹೋಲಿಕೆ ಮಾಡಿ ಮೇಲ್ಕಂಡ ಆದೇಶಗಳನ್ನು ಪುನರ್ ಪರಿಶೀಲಿಸಿ ಹೊಸ ಆದೇಶ ಮಾಡಿಸಿಕೊಡಬೇಕಾಗಿ ಮನವಿ ಸಲ್ಲಿಸಲಾಗಿದೆ.
ವರದಿ : ವಿಠಲ್ ಶೃಂಗೇರಿ
7676798969
