ಶೃಂಗೇರಿ: ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶೀರ್ಲು ಎಂಬ ಗ್ರಾಮದ ಅಡಲಕ್ಕಿ ಎಂಬಲ್ಲಿ ಕಾಡಾನೆ ಹಾವಳಿ. ಗ್ರಾಮದ ಸೀತು ಎಂಬ ಮಹಿಳೆಯ ಗದ್ದೆ, ತೋಟಕ್ಕೆ ಕಳೆದ 15 ದಿನಗಳಿಂದ ನಿರಂತರ ದಾಳಿ ಮಾಡಿ ಅಡಿಕೆ ಮರ,ಫಸಲು ಬಂದ ಭತ್ತದ ಬೆಳೆಯನ್ನು ಸಂಪೂರ್ಣ ನಾಶ ಮಾಡಿದೆ. ಹಗಲಿಡೀ ಜಮೀನಿನ ಪಕ್ಕದ ದಟ್ಟ ಕಾಡಾನಲ್ಲಿರುವ ಕಾಡಾನೆ ಸಂಜೆಯಾಗುತ್ತಿದ್ದಂತೆ ಜಮೀನಿಗೆ ಬರತ್ತೆ. ಜಮೀನಿನ ಪಕ್ಕದಲ್ಲೇ ಇರುವ ಮನೆಯಲ್ಲಿ ಮೂರು ಜನ ವಾಸವಿದ್ದು,ಆ ಮೂವರು ಮಹಿಳೆಯರಾಗಿದ್ದಾರೆ. ಎಲ್ಲರಿಗೂ ವಯಸ್ಸಾಗಿದ್ದು,ತುಂಬಾ ಮುಗ್ದ ಜನರಿದ್ದಾರೆ. ಜೀವನಕ್ಕಾಗಿ ತಾವೇ ಉತ್ತಿ,ಬಿತ್ತಿದ ಜಮೀನನ್ನು ಆನೆ ನಾಶ ಮಾಡಿದ್ದರಿಂದ ಜೀವನಕ್ಕೆ ಮುಂದೇನು ಎಂಬ ಚಿಂತೆ ಶುರುವಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ದಿನವೂ ಸಂಜೆ 7 ಗಂಟೆಗೆ ಬಂದು ರಾತ್ರಿ 11 ಗಂಟೆಯ ವರೆಗೆ ಇದ್ದು ಪಟಾಕಿ ಹೊಡೆದು ಹೋಗ್ತಾರೆ,ಆದರೆ ಆನೆ ಅವರ ಕಣ್ಣಿಗೂ ಕಾಣಿಸದೇ ಬಂದು ರಾತ್ರಿ ಇಡೀ ಜಮೀನಿನಲ್ಲೇ ಇದ್ದು ಬೆಳಗಾಗುವಷ್ಟರಲ್ಲಿ ಕಾಡು ಸೇರಿಕೊಳ್ಳುತ್ತಿದೆ.
ಆನೆ ಇರುವ ಸ್ಥಳದ ನಿಖರ ಮಾಹಿತಿ ಲಭ್ಯವಾಗದ ಕಾರಣ ಇಟಿಎಫ್ ಸಿಬ್ಬಂದಿ ಕರೆಸಿ ಆನೆಯನ್ನು ಬೇರೆಡೆ ಓಡಿಸುವ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.
ಡ್ರೋನ್ ಮುಖಾಂತರ ಆನೆ ಪತ್ತೆಹಚ್ಚಲು ಪ್ರಯತ್ನ ನಡೆಸಿದ್ದು,ಡ್ರೋನ್ ನಲ್ಲಿ ಆನೆ ಇರುವುದು ಖಚಿತವಾಗಿದೆ. ಆದರೆ ದಟ್ಟ ಕಾಡಿರುವುದರಿಂದ ಆನೆಯ ಚಲನವಲನಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತಿಲ್ಲ,ಡ್ರೋನ್ ಕಣ್ಣಿಗೆ ಕಾಣಿಸುತ್ತಿಲ್ಲ.
ಆನೆ ಬಂದರೆ ಪತ್ತೆಹಚ್ಚಲು ಡ್ರೋನ್ ಇಲ್ಲ,ಇಟಿಎಫ್ ಸಿಬ್ಬಂದಿಗಳಿಲ್ಲ
ಆನೆ ಇರುವ ಸ್ಥಳ ಪತ್ತೆ ಹಚ್ಚಲು ಪರದಾಡುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಸೂಕ್ತ ಉಪಕರಣಗಳ ಕೊರತೆ ಕೂಡ ಎದುರಾಗಿದೆ. ಸಾಮಾನ್ಯ ಡ್ರೋನ್‌ಗಳಲ್ಲಿ ಕಾಡಿನ ಮಧ್ಯೆ ಇರುವ ಆನೆಯನ್ನು ಪತ್ತೆಹಚ್ಚುವುದು ಕಷ್ಟದ ಕೆಲಸ ಅದಕ್ಕಾಗಿ ಅತಿಹೆಚ್ಚು ಆಧುನೀಕರಿಸಿದ ಡ್ರೋನ್ ಬೇಕಾಗಿದೆ ಆದರೆ ಅಂತಹ ಡ್ರೋನ್ ಸದ್ಯ ಇರುವುದು ಹಾಸನದಲ್ಲಿ ಪ್ರತಿಬಾರಿ ಡ್ರೋನ್ ಬೇಕಾದಗಲೂ ಹಾಸನದಿಂದ ತರಬೇಕು ತಂದು ಆನೆಯನ್ನು ಪತ್ತೆಹಚ್ಚಬೇಕು ಡ್ರೋನ್ ಹಾಸನದಿಂದ ಶೃಂಗೇರಿಗೆ ಬರುವಷ್ಟರಲ್ಲಿ ತುಂಬಾ ಸಮಯ ಹಿಡಿಯತ್ತೆ
ಇನ್ನೂ ಡ್ರೋನ್ ಬಂದು ಕಾರ್ಯಾಚರಣೆ ನಡೆಸಿ ಆನೆ ಇರುವ ಸ್ಥಳ ಖಚಿತಗೊಂಡ ಮೇಲೆ ಇಟಿಎಫ್ ಸಿಬ್ಬಂದಿಗೆ ತಿಳಿಸಬೇಕು ಆದರೆ ಅವರಿರುವುದು ಕೆರೆಕಟ್ಟೆಯಿಂದ ಸುಮಾರು 70-80 ಕಿ ಮೀ ದೂರದ ಎನ್ ಆರ್ ಪುರದಲ್ಲಿ ಅವರಿಗೆ ವಿಷಯ ತಿಳಿದ ಮೇಲೆ ಸ್ಥಳಕ್ಕೆ ಬರಲು ಸುಮಾರು 2:30 ಯಿಂದ 3 ಗಂಟೆ ಬೇಕು ಅಷ್ಟೊತ್ತಿಗಾಗಲೇ ಆನೆ ದಟ್ಟ ಕಾಡಿನ ಮಧ್ಯೆ ಸೇರಿರುತ್ತದೆ,ಡ್ರೋನ್ ಕೂಡ ಆ ಕಾಡಿನ ಮಧ್ಯದಲ್ಲಿ ಆನೆ ಪತ್ತೆ ಹಚ್ಚಲಾಗುವುದಿಲ್ಲ ಹೀಗಿದೆ ಇಲ್ಲಿನ ಪರಿಸ್ಥಿತಿ ಎಂದು ಕಿಡಿಕಾರಿದರು.
ಸಂಪೂರ್ಣ ಬೆಳೆ ನಾಶವಾಗಿದ್ದು ಅದಕ್ಕೆ ಸೂಕ್ತ ಪರಿಹಾರ ನೀಡಬೇಕಿದೆ,ತೊಂದರೆ ನೀಡುತ್ತಿರುವ ಕಾಡಾನೆಯು ಅಮಾಯಕ ಜೀವಗಳನ್ನು ಬಲಿ ಪಡೆಯುವ ಮೊದಲು ಕೂಡಲೇ ಅಲ್ಲಿಂದ ಸ್ಥಳಾಂತರಿಸಬೇಕಿದೆ ಹಾಗೂ ಕೂಡಲೇ ಅಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಪುನರ್ವಸತಿ ಯೋಜನೆಯಡಿ ಸದ್ಯದ ಮಾರುಕಟ್ಟೆ ಬೆಲೆಗನುಗುಣವಾಗಿ ಸೂಕ್ತ ಪರಿಹಾರ ನೀಡಿ ಅವರಿಗೆ ಪುನರ್ವಸತಿ ಕಲ್ಪಿಸಬೇಕಿದೆ ಎಂಬುದು ಅಲ್ಲಿನ ಗ್ರಾಮಸ್ಥರು,ಪ್ರಮುಖರ ಆಗ್ರಹ.
ಸಿದ್ದರಾಮಯ್ಯ ಡಿಕೆಶಿಗೆ ನಾಟಿ ಕೋಳಿ ಬೇಕಾದರೆ ನಾವು ಕೊಡ್ತೇವೆ,ಇಲ್ಲೇ ಸಾಕಾಣಿಕೆ ಮಾಡ್ತಾರೆ ಆದರೆ ಮೊದಲು ಇಲ್ಲಿನ ಕಾಡು ಪ್ರಾಣಿಗಳಿಂದ ಮುಕ್ತಿ ಕೊಡಿಸಿ,ಸೂಕ್ತ ಪರಿಹಾರ ಪುನರ್ವಸತಿ ಕಲ್ಪಿಸಿಕೊಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ನೂತನ್ ಕುಮಾರ್ ಕಿಗ್ಗಾ,ರಾಜೇಶ್ ದ್ಯಾವಂಟು,ಸಚೀಂದ್ರ,ಸುದೇಶ್, ಚಂದ್ರಶೇಖರ ಶೆಟ್ಟಿ ಗ್ರಾ ಪಂ ಅಧ್ಯಕ್ಷ,ನವೀನ್ ಗ್ರಾ ಪಂ ಸದಸ್ಯ, ಕಳಸಪ್ಪ ಇತರರ ಉಪಸ್ಥಿತರಿದ್ದರು.
ವರದಿ: ವಿಠಲ್ ಶೃಂಗೇರಿ
7676798969
