Wednesday, February 11, 2026
Homeಜಿಲ್ಲಾಸುದ್ದಿಶೃಂಗೇರಿ: ಆನೆ ಮತ್ತು ಕಾಡು ಪ್ರಾಣಿಗಳ ಹಾವಳಿ ತಡೆಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ

ಶೃಂಗೇರಿ: ಆನೆ ಮತ್ತು ಕಾಡು ಪ್ರಾಣಿಗಳ ಹಾವಳಿ ತಡೆಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ

ಶೃಂಗೇರಿ: ಆನೆ, ಕಾಡುಕೋಣ ಮತ್ತು ಇನ್ನಿತರೆ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಶೃಂಗೇರಿ ತಾಲ್ಲೂಕಿನಾದ್ಯಂತ ಇತ್ತಿಚಿಗೆ ಆನೆಗಳಿಂದ ರೈತರ ಬೆಳೆಗಳಿಗೆ ಬಾಳೆ, ಅಡಿಕೆ ಇನ್ನು ಮುಂತಾದ ಬೆಳೆಗಳಿಗೆ ತೀವ್ರವಾದ ಹಾನಿ ಉಂಟು ಮಾಡುವುದಲ್ಲದೆ ಜನ ಸಾಮಾನ್ಯರ ವಾಸದ ಮನೆಯ ಹತ್ತಿರ ಬಂದು ಹಾನಿ ಉಂಟು ಮಾಡುತ್ತಿದೆ. ಜನರಿಗೂ ಸಹ ಜೀವಕ್ಕೆ ಅಪಾಯ ಉಂಟು ಮಾಡುತ್ತಿವೆ. ಇದರಿಂದ ರೈತರ ಕೃಷಿ ಜಮೀನುಗಳಿಗೆ ಓಡಾಡಲು ಸಹ ಕಷ್ಟಕರವಾಗಿರುತ್ತದೆ. ಆನೆಗಳ ಚಲನ ವಲನಗಳನ್ನು ಡ್ರೋನ್ ಮೂಲಕ ಪತ್ತೆಹಚ್ಚಿ ಸಾರ್ವಜನಿಕರಿಗೆ ಧ್ವನಿ ವರ್ಧಕಗಳ ಮೂಲಕ ತಿಳಿಸಬೇಕು. ಆನೆಗಳಿಂದ ರೈತರಿಗೆ ತೊಂದರೆ ಆಗದಂತೆ ನಿಯಂತ್ರಿಸಬೇಕು.

ಇತ್ತಿಚಿಗೆ ಕಾಡುಕೋಣಗಳಿಂದಲೂ ಸಹ ರೈತರ ಬೆಳೆಗಳಿಗೆ ತೀವ್ರವಾದ ಹಾನಿ ಉಂಟಾಗುತ್ತಿದ್ದು, ರೈತರ ಬೆಳೆ ನಷ್ಟದಿಂದಾಗಿ ಕಾಡುಕೋಣಗಳ ಹಾವಳಿಯನ್ನು ಸಹಿಸುವುದು ಕಷ್ಟ ಸಾಧ್ಯವಾಗಿದೆ. ಈ ಕಾಡು ಕೋಣಗಳ ಹಾವಳಿಯನ್ನು ತಡೆಗಟ್ಟಲು ರೈತರು ಮಾಡುವ ಬೇಲಿಗಳಿಗೆ ಸಹಾಯಧನವನ್ನು ಕೊಡಿಸಬೇಕು. ಕಾಡುಕೋಣಗಳನ್ನು ನಿಯಂತ್ರಿಸುವುದರ ಜೊತೆಗೆ ರೈತರ ಬೆಳೆಗಳಿಗಾದ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಕೊಡಿಸಬೇಕು.

ಶೃಂಗೇರಿ ತಾಲ್ಲೂಕಿನಾದ್ಯಂತ ಮಂಗ, ಚಿರತೆ, ಹುಲಿ, ಇನ್ನು ಮುಂತಾದ ಕಾಡು ಪ್ರಾಣಿಗಳಿಂದಲೂ ಸಹ ರೈತರ ಬೆಳೆಗಳಿಗೆ ತೀವ್ರವಾದ ಹಾನಿ ಉಂಟಾಗುತ್ತಿದೆ. ಈ ಕಾಡು ಪ್ರಾಣಿಗಳನ್ನು ನಿಯಂತ್ರಿಸುವುದರೊಂದಿಗೆ ಇವುಗಳಿಂದಾದ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಕೊಡಿಸುವಂತೆ ಆಗ್ರಹಿಸಿದ್ದಾರೆ.

ಅಧ್ಯಕ್ಷರಾದ ಚಂದ್ರಶೇಖರ್ ಕಾನೊಳ್ಳಿ, ಮುಖಂಡರಾದ ಶ್ರೀಧರ್ ರಾವ್ ಬಂಡ್ಲಾಪುರ ಗಿಣಿಕಲ್ ಚಂದ್ರಶೇಖರ್ ಇತರರು ಹಾಜರಿದ್ದರು.

ವರದಿ: ವಿಠ್ಠಲ್‌ ಶೃಂಗೇರಿ

ದೂರವಾಣಿ ಸಂಖ್ಯೆ: 7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!