ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನು ಮಂಜೂರು ಮಾಡಿದರು ಯಾವುದೇ ಬದಲಾವಣೆಯಾಗಿಲ್ಲ ತಾಲೂಕು ವೈದ್ಯಾಧಿಕಾರಿಗಳನ್ನ ಹೊರತುಪಡಿಸಿದರೆ ವೈದ್ಯರಿಲ್ಲದೇ ಬಿಕೋ ಎನ್ನುತ್ತಿದೆ. 30 ಬೆಡ್ ಸಾಮರ್ಥ್ಯದ ಆಸ್ಪತ್ರೆಯು 2007ರಲ್ಲಿ 100 ಬೆಡ್ ಆಸ್ಪತ್ರೆಯಾಗಿ ದಾಖಲೆಯಲ್ಲಿ ಮಾತ್ರ ಮಂಜೂರಾತಿ ಆಗಿದೆ. ಅಗತ್ಯ ಸೌಲಭ್ಯಗಳಿಲ್ಲದೇ ಖಾಲಿ ಹೊಡೆಯುತ್ತಿದೆ. ಹಿಂದಿನ ಆರೋಗ್ಯ ಡಾ. ಕೆ.ಸುಧಾಕರ್ ಶೃಂಗೇರಿಗೆ ಭೇಟಿ ನೀಡಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ ಸಾರ್ವಜನಿಕರು, 100 ಆಸ್ಪತ್ರೆ ಮಾಡಲು ಮನವಿ ಮಾಡಿದ್ದರು. ಆಗ ಸಚಿವರ ಮನವಿ ಮೇರೆಗೆ ಜಾಗ ಗುರುತಿಸಲು ತಹಶೀಲ್ದಾರ್ʼಗೆ ತಿಳಿಸಿದ್ದರು. ಜಾಗ ಗುರುತು ಮಾಡಿದ ನಂತರ ಶಂಕುಸ್ಥಾಪನೆ ನೆರವೇರಿತು. ಆದರೆ ಕಾರಣಾಂತರಗಳಿಂದ ನೂರು ಬೆಡ್ ಆಸ್ಪತ್ರೆ ಅಲ್ಲಿಗೇ ರದ್ದಾಯಿತು.

ಜನರಲ್ ಸರ್ಜನ್ , ಕಿವಿ ಡಾಕ್ಟರ್, ಕಣ್ಣು ಡಾಕ್ಟರ್, ಕೀಲು-ಮೂಳೆ ತಜ್ಞ, ಗಂಟಲು ತಜ್ಞ, ಚರ್ಮರೋಗ ತಜ್ಞರು, ಪ್ರಸೂತಿ ತಜ್ಞರು, ರೆಡಿಯೋಲಜಿ ಹೀಗೆ ದೀರ್ಘಕಾಲದಿಂದ ಈ ಹುದ್ದೆಗಳು ಖಾಲಿ ಇವೆ. ತುರ್ತು ಚಿಕಿತ್ಸೆಗಳಾದ ಅಪಘಾತ, ಕಿಡ್ನಿ, ಹೃದಯಾಘಾತ, ಮೆದುಳು ಸಮಸ್ಯೆ, ಹೊಟೆನೋವು, ದಂತ ಚಿಕಿತ್ಸೆ ಯಂತ್ರೋಪಕರಣ, ಮೂಳೆ ಜೋಡಿಸುವುದು ಮುಂತಾದ ಆಪರೇಷನ್ ಮಾಡಿಸಿಕೊಳ್ಳಲು ಎಕ್ಸರೇ, ರೆಡಿಯೋಲಾಜಿ ಸೇರಿ ಹಲವು ರೀತಿಯ ಟ್ರೀಟ್ ಮೆಂಟ್ ತೆಗೆದುಕೊಳ್ಳಲು ಸಹ ಯಾವುದೇ ರೀತಿಯ ತಜ್ಞರ ಫೆಸಿಲಿಟಿ ಇಲ್ಲ . ಅವರೆಲ್ಲರೂ ಚಿಕ್ಕಮಗಳೂರು , ಶಿವಮೊಗ್ಗ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೇ ರಾತ್ರಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿ ಆಸ್ಪತ್ರೆಗೆ ಬಂದರೆ ವೈದ್ಯರಿಲ್ಲದೇ ರೋಗಿಗಳು ವಾಪಸ್ ಹೋಗುತ್ತಿದ್ದಾರೆ.