ಮೂಡಿಗೆರೆ : ಅತ್ತಿಗೆರೆಯ ಮಂಡಲು ಬೈಲ್ ಗದ್ದೆಯಲ್ಲಿ ಆ.25 ಭಾನುವಾರ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ.
ಮೊದಲನೆ ವರ್ಷದ ಕ್ರೀಡಾಕೂಟ ಇದಾಗಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿದೆ. ನಿಧಿಶೋಧ, ಹಗ್ಗಜಗ್ಗಾಟ, ಒಂಟಿಕಾಲು ಓಟ, ನಿಂಬೆ ಚಮಚ ಓಟ, 100 ಮೀ. ಓಟ, ವಾಲಿಬಾಲ್, ಥ್ರೋಬಾಲ್ ಪಂದ್ಯಗಳನ್ನು ವಿವಿಧ ವಿಭಾಗದಲ್ಲಿ ಏರ್ಪಡಿಸಲಾಗಿದೆ. ಪ್ರತಿ ಸ್ಪರ್ಧೆಗೂ ಪ್ರವೇಶ ಶುಲ್ಕವಿರುತ್ತದೆ. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಕಾಮಿಡಿ ಕಿಲಾಡಿಯ ರಮೇಶ್ ಯಾದವ್ ಆಗಮಿಸಲಿದ್ದಾರೆ. ಮಧು ಅಧ್ಯಕ್ಷತೆ ವಹಿಸಲಿದ್ದು, ಕೆಚ್ಚೆದೆ ಕನ್ನಡತಿ ಅಕ್ಕ ಅನು, ಬಣಕಲ್ ಸಬ್ ಇನ್ಸ್ಪೆಕ್ಟರ್ ಡಿ.ವಿ. ರೇಣುಕಾ ಮುಂತಾದವರು ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಕೊಟ್ಟಿಗೆಹಾರ ಅತ್ತಿಗೆರೆಯಲ್ಲಿ ಆ.25ಕ್ಕೆ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ
RELATED ARTICLES