ಚಿಕ್ಕಮಗಳೂರು: ತಾಲೂಕಿನವರ ಇಂದಾವರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸುಭಾಷ್ ಐ.ಬಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಹೌದು … ಸೋಮವಾರ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಐ .ಬಿ ಸುರೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಘೋಷಣೆ ಮಾಡಲಾಯಿತು
ನೂತನ ಅಧ್ಯಕ್ಷರ ಅಭಿನಂದನ ಸಮಾರಂಭದಲ್ಲಿ ಭಾಗವಹಿಸಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಅವರು ಮಾತನಾಡಿ ಮಾಜಿ ಶಾಸಕ ಸಿ.ಟಿ. ರವಿ ಅವರು ಈ ಗ್ರಾಮ ಪಂಚಾಯಿತಿಗೆ ಅತೀ ಹೆಚ್ಚು ಅನುದಾನ ನೀಡಿ ಅಭಿವೃದ್ಧಿಗೆ ಸಹಕರಿಸಿದ್ದಾರೆ ಈ ನಿಟ್ಟಿನಲ್ಲಿ ಸಿ.ಟಿ. ರವಿ ಅವರ ಶಿಶ್ಯನೇ ಅಧ್ಯಕ್ಷರಾಗಿದ್ದು ತುಂಬಾ ಖುಷಿ ವಿಚಾರ ಎಂದು ಹೇಳಿದರು.

ಹಾಗೆ ಇಂದಾವರ ಗ್ರಾಮದ ಸೊಸೈಟಿ ಸೇರಿದಂತೆ ಗ್ರಾಮಪಂಚಾಯಿತಿ ಆಡಳಿತದ ಉತ್ಸಾಹಿ ಯುವಕರು ಅಧ್ಯಕ್ಷರಾಗಿರೋದು ಖುಷಿ ಸಂಗತಿ ಹಾಗೆ ಗ್ರಾಮದಲ್ಲಿ ಸಮಸ್ಯೆಯಿಂದ, ತೊಂದರೆಯಿಂದ ಬಳಲುತ್ತಿರುವ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ನಗರ ಸಭೆಯೊಂದಿಗೆ ಚರ್ಚಿಸಿ ಎಂದು ಕಿವಿಮಾತು ಹೇಳಿದರು.
ಅದಲ್ಲದೇ ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಐ.ಬಿ.ಸುಭಾಷ್ , ಗ್ರಾಮಸ್ಥರು, ಸದಸ್ಯರ ಸಹಕಾರದಿಂದ ಸಿಕ್ಕಿದ್ದ ಈ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ನಿಮ್ಮ ಭರವಸೆ ಉಳಿಸಿಕೊಳ್ಳುತ್ತೇನೆ ಹಾಗೆ ಜನರ ಕುಂದುಕೊರತೆಗಳ ಆಲಿಸಿ ತಾರತಮ್ಯವಿಲ್ಲದೇ ಕಾರ್ಯ ಮಾಡುತ್ತೇನೆ ಎಂದು ಹೇಳಿದರು
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಗ್ರಾಮಪಂ ಉಪಾಧ್ಯಕ್ಷ ದಾಕ್ಷಾಯಿಣಿ, ಸದಸ್ಯರಾದ ಜ್ಯೋತಿ ಯೋಗೀಶ್, ನೇತ್ರಾವತಿ ಕೆಂಚಯ್ಯ, ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ ,ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಇಂದಾವರ ಸಹಕಾರ ಸಂಘದ ಅಧ್ಯಕ್ಷ ಯತೀಶ್ ಗೌಡ ಮುಖಂಡರುಗಳಾದ ಕೋಟಿ ರಂಗನಾಥ್ ನಿರಂಜನ್, ಕುರುವಂಗೆ ವೆಂಕಟೇಶ್ ,ರಾಜೀವ್, ಮಧುಕರ್ ಅರಸ್, ಹಂಪಯ್ಯ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.