Tuesday, March 31, 2026
Homebig breakingಬೆಂಬಲಿಗರು ಬರಲ್ಲ, ಗನ್ ಮ್ಯಾನ್ ಬರಲ್ಲ… ನಾನು ಒಬ್ಬನೇ ಬರ್ತೇನೆ, ತಾಕತ್ತಿದ್ದರೆ ತಡಿ ನೋಡೋಣ -...

ಬೆಂಬಲಿಗರು ಬರಲ್ಲ, ಗನ್ ಮ್ಯಾನ್ ಬರಲ್ಲ… ನಾನು ಒಬ್ಬನೇ ಬರ್ತೇನೆ, ತಾಕತ್ತಿದ್ದರೆ ತಡಿ ನೋಡೋಣ – ವಿಜಯೇಂದ್ರಗೆ ಸವಾಲೆಸೆದ ರಮೇಶ್‌ ಜಾರಕಿಹೊಳಿ..!

ಬೆಳಗಾವಿ : BJP ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಮಾಜಿ ಸಚಿವ ಜಾರಕಿಹೊಳಿ ಏಕವಚನದಲ್ಲಿ ಹರಿಹಾಯ್ದಿದ್ದಾರೆ. ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್, ಇಂದಿಗೂ ಯಡಿಯೂರಪ್ಪ ನಮ್ಮ ನಾಯಕ, ಅದರಲ್ಲಿ ಎರಡು ಮಾತಿಲ್ಲ ಅಂತ ವಿಜಯೇಂದ್ರಗೆ ತಿರುಗೇಟು ಕೊಟ್ಟಿದ್ದಾರೆ.
ಯಡಿಯೂರಪ್ಪ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ವಿಜಯೇಂದ್ರ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್‌ ಜಾರಕಿಹೊಳಿ, ಇಂದಿಗೂ ನಾನು ಯಡಿಯೂರಪ್ಪ ಮೇಲೆ ಅಗೌರವದಿಂದ ಮಾತಾಡಿಲ್ಲ. ಅವರ ಮೇಲೆ ಗೌರವ ಇದೆ. ಆದ್ರೇ ನೀನು ಸುಳ್ಳು ಹೇಳುವುದು ಬಿಡು. ನಾನು ಶಿಕಾರಿಪುರಕ್ಕೆ ಬರುತ್ತೇನೆ. ವಿಜಯೇಂದ್ರ ಮನೆ ಮುಂದಿನಿಂದ ಪ್ರವಾಸ ಶುರು ಮಾಡುತ್ತೇನೆ. ನಿನ್ನ ಸವಾಲು ಸ್ವೀಕಾರ ಮಾಡಿದ್ದೇನೆ ಅಂತ ಪ್ರತಿ ಸವಾಲು ಹಾಕಿದ್ದಾರೆ.
ನೀನು ದಿನಾಂಕ ನಿಗದಿ ಮಾಡು, ಬೆಂಬಲಿಗರು ಬರಲ್ಲ, ಗನ್ ಮ್ಯಾನ್ ಬರಲ್ಲ ನಾನು ಒಬ್ಬನೇ ಬರ್ತೇನೆ. ಅಲ್ಲಿಂದ ಪ್ರವಾಸ ಆರಂಭ ಮಾಡುತ್ತೇನೆ ಸಾಧ್ಯವಾದರೆ ತಡಿ ನೋಡೋಣ ಎಂದು ಬಿವೈ ವಿಜಯೇಂದ್ರರಿಗೆ ಸವಾಲು ಹಾಕಿದರು. ನಮ್ಮಲ್ಲಿ ಜಗಳ ಇರೋದು ಅಧ್ಯಕ್ಷರ ಬದಲಾವಣೆಗೆ ಅಷ್ಟೇ. ಅಧ್ಯಕ್ಷ ಬದಲಾವಣೆಯಾದರೆ ಒಕೆ. ಇಲ್ಲವಾದರೆ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!