ಮೂಡಿಗೆರೆ ತಾಲೂಕಿನಲ್ಲಿ ತಾಲೂಕು ಕಚೇರಿ ಒಂದಲ್ಲ ಒಂದು ವಿಚಾರದಲ್ಲಿ ಸದಾ ಸದ್ದು ಮಾಡುತ್ತಿದ್ದು. ಇದೀಗ ಅಧಿಕಾರದ ದುರ್ಬಳಕೆ ಆರೋಪ ಕೇಳಿ ಬಂದಿದೆ.
ಹೌದು. ಮೂಡಿಗೆರೆ ತಾಲೂಕು ಕಸಬಾ ಹೋಬಳಿ ಹೆಸಗಲ್ ಗ್ರಾಮ ಸರ್ವೆ ನಂಬರ್ 102 ರಲ್ಲಿ ಒಟ್ಟು 42.23 ಗುಂಟೆ ಜಮೀನು ಇದ್ದು 9 ಎಕರೆ 15 ಗುಂಟೆ ಪುಟ್ ಖರಾಬ್ ಇದ್ದು ಇನ್ನುಳಿದ 33 ಎಕರೆ 08 ಗುಂಟೆಯಲ್ಲಿ
1)102/*/*ರಲ್ಲಿ ಗೋಮಾಳ 19 ಎಕರೆ 33ಗುಂಟೆ
2)102/*/P1ರಲ್ಲಿ 1 ಎಕರೆ 35 ಗುಂಟೆ ಉದ್ದಯ್ಯಾ (ಪರಿಶಿಷ್ಟ ಜಾತಿ) ರವರು ಹೊಂದಿದ್ದು
3)102/*/P4ರಲ್ಲಿ 04 ಎಕರೆ 20ಗುಂಟೆ (ವೆಂಕಪ್ಪ ಗೌಡರವರಿಂದ ಕ್ರಯ) ಹಫೀಜುಲ್ ರೆಹಮಾನ್ ಹೊಂದಿದ್ದು
4)102/*/P2ರಲ್ಲಿ 3 ಎಕರೆ ಗಂಗಾಧರ ಶೆಟ್ಟಿ(ಬಂಟ) ರವರಿಗೆ
5)102/*/P3 4ಎಕರೆ ಮೀನಾಕ್ಷಿ(ಬಿಲ್ಲವ) ಎನ್ನುವವರಿಗೆ 1978 ರಲ್ಲಿ(ಬಗರ್ ಹುಕುಂ) ಮಂಜೂರಾಗಿದೆ
(MR-3/79-80) ಅನುಭವದಲ್ಲಿ ಇದ್ದು 2005 ರ ತನಕ ಅವರ ಹೆಸರಿನಲ್ಲಿ ಪಹಣಿ ಬರುತ್ತಿದ್ದು ಇದಕ್ಕೆ ಇದ್ದ ಹಾಗೆ 2005 ರ ನಂತರ ಸರ್ಕಾರಿ ಅಂತ ಬಂದಿದ್ದು ಹೇಗೆ ಎಂದು ನೋಡಿದಾಗ ತಾಲೂಕು ದಂಡಾಧಿಕಾರಿಗಳು ಸರ್ಕಾರಿ ಎಂದು ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಈ ಕುರಿತು ಸ್ಥಳೀಯರಾದ ವಿನಯ್ ಮಗ್ಗಲಮಕ್ಕಿ ಸುದ್ದಿಗಾರರೊಂದಿಗೆ ಮಾತನಾಡಿ ಭಾರತೀಯ ಕಾನೂನು ಪ್ರಭಾವಿಗಳಿಗೆ ಒಂದು ಬಡವರಿಗೆ ಒಂದಾಗಿದ್ದು, ಹಣದ ಆಮಿಷಕ್ಕೆ ಅಧಿಕಾರಿಗಳು ಕೈ ಒಡ್ಡಿ ಬಡವರ ಹೊಟ್ಟೆಗೆ ಹೊಡೆಯುತ್ತಿದ್ದಾರೆ ಎಂದು ದೂರಿದರು.

ಅಂದಿನ ಕಾನೂನಿನ ಪ್ರಕಾರ 15 ವರ್ಷಗಳ ನಂತರ ಪರಬಾರೆ (ಸೇಲ್) ಮಾಡಬಹುದಾದಂತ ಜಮೀನನ್ನು 25ವರ್ಷಗಳ ನಂತರ ಪಕ್ಕದ ಜಮೀನಿನ ಹಫಿಜುಲ್ ರೆಹೇಮಾನ್ ಮತ್ತು ಅವರ ಮಕ್ಕಳೊಂದಿಗೆ ಆಮಿಷಕ್ಕೆ ಒಳಗಾಗಿ ತಾಲೂಕು ದಂಡಾಧಿಕಾರಿಗಳಿಗೆ ಸರ್ಕಾರಿ ಮಾಡುವ ಅಧಿಕಾರವಿಲ್ಲದಿದ್ದರ ಕಾನೂನು ಉಲ್ಲಂಘಿಸಿ ಸರ್ಕಾರಿ ಎಂದು ಪಹಣಿ ತಿದ್ದುಪಡಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಗಂಗಾಧರ ಶೆಟ್ಟಿ ಅವರು ದಾವೆ ಹೂಡುತ್ತಾರೆ ಅದರಂತೆ ಸಿವಿಲ್ ಕೋರ್ಟ್ ದಾಖಲೆ ಪರಿಶೀಲಿಸಿ ಗಂಗಾದರ ಶೆಟ್ಟಿ ಅವರಿಗೆ ಪಹಣಿ ಮಾಡಿಕೊಡುವಂತೆ ಸೂಚಿಸುತ್ತದೆ ಆದರೆ ಸಿವಿಲ್ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಪಹಣಿಯನ್ನು ಸರ್ಕಾರಿ ಎಂದೆ ತೋರಿಸಿಕೊಂಡು ಬಂದಿರುವುದು ನಿಜಕ್ಕೂ ಬೇಸರದ ವಿಚಾರ ಎಂದರು.
ಗಂಗಾಧರ್ ಶೆಟ್ಟಿ ಅಸುನೀಗಿದ ಬಳಿಕ ನಂತರ ಅವರ ಮಗ ಲೋಹಿತ್ ಶೆಟ್ಟಿ ಅವರು ಈ ಪ್ರಕರಣದ ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದಾಗ ಸರ್ವೆ ನಂ 102ರಲ್ಲಿ ಜಾವಿದ್ ಅಸ್ಲಾಮ್ ಬಿನ್ ಹಫೀಜುಲ್ ರೇಹೆಮಾನ್ ಜಮಿನನ್ನು ಹೊರತು ಪಡಿಸಿ ಮಿಕ್ಕ ಉದ್ದಯ್ಯ ಗಂಗಾಧರ ಶೆಟ್ಟಿ ಮೀನಾಕ್ಷಿ ರವರ ಮಂಜೂರಿ ಕಡತ ನಾಶವಾಗಿದೆ ಎಂದು ತಾಲೂಕು ಕಛೇರಿ ಅಲ್ಲಿ ಮಾಹಿತಿ ನೀಡುತ್ತಾರೆ. ಆದರೆ ಇದಕ್ಕೂ ಮೊದಲೆ ಗಂಗಾಧರ ಶೆಟ್ಟಿ ಅವರು ದಾವೆ ಹೂಡುವಾಗಲೆ ಮಂಜುರಿ ಕಡತ ಸಿ.ಆರ್.ಸಿ ಕಾಯಂ ಸಾಗುವಳಿ ಚೀಟಿ ಸೇರಿದಂತೆ ಎಲ್ಲ ದಾಖಾಲಾತಿ ವಕೀಲರ ಬಳಿ ಕೊಟ್ಟಿದ್ದರು. ತಾಲೂಕು ಕಛೇರಿ ದಾಖಲಾತಿ ಕೊಠಡಿನಲ್ಲಿ ಪ್ರಭಾವಿಗಳು ಕಡತ ನಾಶಪಡಿಸಿದ್ದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಅಧಿಕಾರ ದುರ್ಬಳಕೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿಲ್ಲದಿರುವುದು ನಿಜಕ್ಕೂ ನೋವುಂಟು ಮಾಡಿದೆ ಎಂದರು. ಲೋಹಿತ್ ಶೆಟ್ಟಿ ಅವರು ಪ್ರಕರಣವನ್ನು ಬೆಂಗಳೂರು ಉಚ್ಚ ನ್ಯಾಯಲಯದಲ್ಲಿ ವಕೀಲರ ಮುಖೇನ ಮಂಡಿಸಿ ನ್ಯಾಯಾಧೀಶರು ದಾಖಲೆಗಳನ್ನು ಪರಿಶೀಲಿಸಿ ಲೋಹಿತ್ ಶೆಟ್ಟಿ ಅವರಿಗೆ ಯತಾ ಅವರ ಜಾಗ ಗುರುತಿಸಿ ಪಹಣಿ ಮಾಡಿಕೊಡಬೇಕೆಂದು 15.07.2025ರಂದು ಆದೇಶ ನೀಡಿರುತ್ತಾರೆ
ಆದರೆ ಲೋಹಿತ್ ಶೆಟ್ಟಿ ಅವರ ಅನುಭವದಲ್ಲಿ ಇರುವ ಜಾಗವನ್ನು ಆಮಿಷದ ಆಸೆಗೆ ತಾಲೂಕು ಕಛೇರಿ ಯಲ್ಲಿ ಇರುವ ಲಂಚಕೋರರನ್ನೊಳಗೊಂಡ ಎಲ್ಲ ಅಧಿಕಾರಿಗಳ ತಂಡ ಅಫೀಜುಲ್ ರೆಹಮಾನ್ ಅವರ ಮಗ ಜಾವಿದ್ ಅಸ್ಲಾಮ್ ಅವರಿಗೆ ಬೇಕಾದಂತೆ ಮುಂದಿನ ಜಾಗವನ್ನು ADLR ಮಾದೇವಯ್ಯ ಗುಮಾಸ್ಥೆ ನಂದಿನಿ ವಿಲೇಜ್ ಅಕೌಂಟೆಂಟ್ ಕಿರಣ್ ಹಾಗು ನಿಸರ್ಗ ರವರೊಂದಿಗೆ ಸರ್ವೆಯರ್ ದೇವರಾಜು ಹಾಗು ರಘು ರವರು ನಕ್ಷೆ ರಚಿಸಿ ನೀಡಿದ್ದು ಅದರಂತೆ ಲೋಹಿತ್ ಶೆಟ್ಟಿ ಅವರಿಗೆ ಸೇರಿದ ಜಾಗದಲ್ಲಿ ಪೋಡಿ ಮಾಡಿಕೊಡಲು ಹಳೇ ತಾಲೂಕು ದಂಡಾಧಿಕಾರಿ ರಾಜಶೇಖರ್ ಹಾಗು ಈಗ ಹೊಸದಾಗಿ ಬಂದಿರುವ ತಾಲೂಕು ದಂಡಾಧಿಕಾರಿ ಅಶ್ವಿನಿ ರಾಜಸ್ವ ನಿರೀಕ್ಷಕರು ಚಂದ್ರಶೇಖರ್ ಪೋಡಿ ವರ್ಕರ್ ಗೀತ ಹಾಗು ಇದೆಲ್ಲದರ ಕಿಂಗ್ ಪಿನ್ ಭೂ ಮಾಫೀಯದವರೊಡನೆ ಕೈ ಜೋಡಿಸಿರುವ ಕಸಬಾ ಉಪ ತಹಶಿಲ್ದಾರ್ ಸುರೇಂದ್ರ ಬಾಬು ರವರ ತಂಡ ಹೊರಟಿದ್ದು ಬಡ ಮಕ್ಕಳ ಹೊಟ್ಟೆಗೆ ಹೊಡೆಯುವ ಹುನ್ನಾರವಾಗಿದೆ ಎಂದರು
ಇನ್ನುಳಿದ ಹಿಂದಿನ ಜಾಗದಲ್ಲಿ ಮೂಡಿಗೆರೆ ಎಂ ಎಲ್ ಎ ನಯನ ಮೋಟಮ್ಮ ಅವರನ್ನು ಮೆಚ್ಚಿಸಲು ಆಶ್ರಯ ನಿವೇಶನಕ್ಕೆ ಮಂಜೂರಿ ಮಾಡಲು ಹೊರಟಿದ್ದಾರೆ. ಅರ್ಜಿಗಳು ಸಾಲು ಸಾಲು ಇದ್ದರು ಕಸಬಾ ರೆವಿನ್ಯೂ ಇನ್ಪೆಕ್ಟರ್ ತಕರಾರು ಅಂತ ಬರೆದು ಮೌನವಾಗಿದ್ದಾರೆ. ಬೆಂಗಳೂರು ಉಚ್ಚ ನ್ಯಾಯಾಲಯ ರೋಹಿತ್ ಶೆಟ್ಟಿ ಅವರಿಗೆ ಖಾತೆ ಮಾಡಿಕೊಡಲು ಸೂಚಿಸಿದ್ದರು ಸರ್ವೆ ನಂಬರ್ 102 ರಲ್ಲಿ (19ಎಕರೆ 33ಗುಂಟೆ +8ಎಕರೆ 35ಗುಂಟೆ ಖರಾಬ್ ) ಇದ್ದು ಇದನ್ನು ಕೆ.ಸಿ ರತನ್ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಒತ್ತುವರಿ ಮಾಡಿಕೊಂಡು ಅಲ್ಲಿದ್ದ ಮರಗಳ್ಳತನ ಮಾಡಿ ಗುಡವನ್ನು ಬಗೆದು ಮಣ್ಣು ಹೊಡೆದು ಕಲ್ಲು ಬಂಡೆಗಳನ್ನು ಡೈನಮೆಟ್ ಇಟ್ಟು ಒಡೆದು ತನ್ನಿಚ್ಚೆಯಂತೆ ರಾಜಕೀಯದ ದರ್ಪ ತೋರುತ್ತಿದ್ದಾರೆ ಎಂದು ದೂರಿದರು. ಇಂತಹ ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು
ವರದಿ : ಪುನೀತ್ ಕಡಿದಾಳ್, 9483811948
