Monday, February 9, 2026
Homeಕ್ರೈಮ್ತರೀಕೆರೆ: ತೋಟದಲ್ಲಿ ಕೆಲಸ ಮಾಡುವಾಗ ರೈತನ ಮೇಲೆ ಕರಡಿ ದಾಳಿ: ಬೆಚ್ಚಿ ಬಿದ್ದ ಜನ

ತರೀಕೆರೆ: ತೋಟದಲ್ಲಿ ಕೆಲಸ ಮಾಡುವಾಗ ರೈತನ ಮೇಲೆ ಕರಡಿ ದಾಳಿ: ಬೆಚ್ಚಿ ಬಿದ್ದ ಜನ

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕರಡಿ ಹಾವಳಿಗೆ ಬೆಚ್ಚಿ ಬಿದ್ದ ಜನ

ಹೌದು.. ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕರಡಿಯೊಂದು ದಾಳಿ ಮಾಡಿದ ಪರಿಣಾಮ ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತರೀಕೆರೆ ತಾಲೂಕಿನ ಎ.ರಾಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಬೆಳಗ್ಗೆಯೇ ತೋಟಕ್ಕೆ ಟ್ರಿಪ್ ಬಳ್ಳಿ ಬಿಡಲು ಹೋಗಿದ್ದ ರೈತ ರಾಮಕೃಷ್ಟ ಮೇಲೆ ಕರಡಿ ದಾಳಿ ಮಾಡಿದ್ದು ರೈತನ ಕೈ ಹಾಗೂ ಕಾಲಿನ ಚರ್ಮವನ್ನು ಕಿತ್ತು ಹಾಕಿದೆ.

ರಕ್ತ ಸುರಿಯುತ್ತಿದ್ರು ಕರಡಿ ಜೊತೆ ಫೈಟ್ ಮಾಡಿ ತಪ್ಪಿಸಿಕೊಂಡು ತೋಟದಿಂದ ಗ್ರಾಮಕ್ಕೆ ಓಡಿ ಬಂದು ಆಸ್ಪತ್ರೆಗೆ ಬಂದ ರೈತ ರಾಮಕೃಷ್ಣ

ಕರಡಿ ದಾಳಿಯ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಗಾಯಾಳುಗಳನ್ನು ದಾಖಲಿಸಿರುವ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿದ್ದಾರೆ.

ರೈತನ ಮೇಲೆ ಏಕಾಏಕಿ ಕರಡಿ ದಾಳಿ ನಡೆಸಿರುವ ಪ್ರಕರಣ ಸುತ್ತಮುತ್ತಲ ಗ್ರಾಮಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!