ಚಿಕ್ಕಮಗಳೂರು: ತರೀಕೆರೆ ಪೊಲೀಸರ ಕಾರ್ಯಾಚರಣೆಯಿಂದ 24 ಘಂಟೆಯೊಳಗೆ ಮನೆಗಳ್ಳನ ಮಾಡಿದ ವ್ಯಕ್ತಿಗಳನ್ನು ಬಂಧಿಸಿರುವ ಪೊಲೀಸರು 8.76 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ 8.90 ಲಕ್ಷ ನಗದು ನಗದನ್ನು ವಶಪಡಿಸಿಕೊಂಡಿದ್ದಾರೆ.
ತರೀಕೆರೆಯ ಕೋಡಿಕ್ಯಾಂಪ್ 9ನೇ ತಿರುವಿನ ಚಿಕ್ಕೇರೆಯ ತವಕ್ಕಲ್‌ಮುಸ್ತಾನ್ ಅವರ ಮನೆಯ ಶೀಟ್ ತೆಗೆದು ಡಿ ೨೦ರಂದು ಒಳನುಗ್ಗಿರುವ ಕಳ್ಳರು 73.5 ಗ್ರಾಂ ಚಿನ್ನಾಭರಣಗಳನ್ನು ಹಾಗೂ 8.90 ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಮನೆಯ ಮಾಲೀಕ ನೀಡಿದ ದೂರನ್ನು ತರೀಕೆರೆಪಟ್ಟಣ ಪೊಲೀಸರು ದಾಖಲಿಸಿಕೊಂಡಿದ್ದರು.
ಡಿವೈಎಸ್ಪಿ ತರೀಕೆರೆ ಉಪವಿಭಾಗ ಶ್ರೀ. ಪರಶುರಾಮಪ್ಪ ಹೆಚ್ ನೇತೃತ್ವದ ಪೊಲೀಸ್ ತಂಡದಲ್ಲಿ ಪಿಐ ತರೀಕೆರೆ ಪೊಲೀಸ್ ಠಾಣೆ ಶ್ರೀ. ರಾಮಚಂದ್ರ ನಾಯಕ್, ಪಿಎಸ್ಐ ಶ್ರೀ. ನಾಗೇಂದ್ರ ನಾಯ್ಕ್, ಶ್ರೀ. ಮಂಜುನಾಥ್ ಮನ್ನಂಗಿ ಮತ್ತು ಶ್ರೀ. ದೇವೇಂದ್ರ ರಾಥೋಡ್, ಎಎಸ್ಐ ಶ್ರೀ. ರವಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶ್ರೀ. ಪ್ರಕಾಶ್, ಶ್ರೀ. ರುದ್ರೇಶ್, ಶ್ರೀ. ರಿಯಾಜ್, ಶ್ರೀ. ಧನಂಜಯಸ್ವಾಮಿ, ಶ್ರೀ. ಮಧು, ಶ್ರೀ. ಕಾಂತರಾಜು, ಶ್ರೀ. ರಾಜೇಶ ಮತ್ತು ಶ್ರೀ. ಶ್ರೀನಿವಾಸ ರವರು ಕಾರ್ಯನಿರ್ವಹಿಸಿರುತ್ತಾರೆ.
