Tuesday, March 31, 2026
Homebig breakingರಾಜ್ಯದಲ್ಲಿ ಮುಂದುವರೆದ ದರೋಡೆಕೋರರ ಅಟ್ಟಹಾಸ - ಮಂಗಳೂರಿನಲ್ಲಿ ಬಂದೂಕು ತೋರಿಸಿ ಬ್ಯಾಂಕ್‌ ಲೂಟಿ..!

ರಾಜ್ಯದಲ್ಲಿ ಮುಂದುವರೆದ ದರೋಡೆಕೋರರ ಅಟ್ಟಹಾಸ – ಮಂಗಳೂರಿನಲ್ಲಿ ಬಂದೂಕು ತೋರಿಸಿ ಬ್ಯಾಂಕ್‌ ಲೂಟಿ..!

ಮಂಗಳೂರು : ರಾಜ್ಯದಲ್ಲಿ ದರೋಡೆಕೋರರ ಅಟ್ಟಹಾಸ ಮುಂದುವರೆದಿದೆ. ಬೀದರ್​​ನಲ್ಲಿ ಎಟಿಎಂಗೆ ಹಣ ತುಂಬಲು ಬಂದಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಹಣ ದರೋಡೆ ಪ್ರಕರಣದ ಮಾರನೇ ದಿನವೇ ಮಂಗಳೂರಿನಲ್ಲಿ ಹಾಡುಹಗಲೇ ಬ್ಯಾಂಕ್ ದರೋಡೆ ಮಾಡಲಾಗಿದೆ. ಬ್ಯಾಂಕ್ ಸಿಬ್ಬಂದಿಗೆ ​ಬಂದೂಕು ತೋರಿಸಿದ ದರೋಡೆಕೋರರು ಹಣ ಎಗರಿಸಿ ಪರಾರಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕು ಕೆ.ಸಿ. ರೋಡ್‌ನಲ್ಲಿರುವ ಕೋಟೆಕಾರು ಬ್ಯಾಂಕ್ ಈ ಕೃತ್ಯ ನಡೆದಿದೆ. ಕಾರಿನಲ್ಲಿ ಬಂದ ಐದು ಮಂದಿ ಆಗಂತುಕರ ತಂಡ ಬಂದೂಕು ತೋರಿಸಿ ದರೋಡೆ ನಡೆಸಿದೆ. ಕೆಲವೇ ನಿಮಿಷದಲ್ಲಿ ಚಿನ್ನ ಒಡವೆ, ನಗದು ದೋಚಿ ಪರಾರಿಯಾಗಿದೆ.

ಮುಸುಕುದಾರಿಗಳು ಒಳಗೆ ಬಂದಾಗ ಬ್ಯಾಂಕ್​ನಲ್ಲಿ ಐದು ಜನ ಸಿಬ್ಬಂದಿ ಮಾತ್ರ ಇದ್ದರು. ಗ್ರಾಹಕರು ಇರಲಿಲ್ಲ. ಎಲ್ಲರನ್ನು ಕೆಳಗೆ ಕುಳಿತುಕೊಳ್ಳಿ ಎಂದು ಹೇಳಿದ ತಂಡ ಲಾಕರ್​ನ ಕೀ ಕೊಡುವಂತೆ ಕೇಳಿದ್ರು. ಮ್ಯಾನೇಜರ್ ಆದೇ ತಾನೆ ಬಂದಿದ್ದರಿಂದ ಲಾಕರ್ ಓಪನ್ ಇತ್ತು. ಈ ವೇಳೆ ಹಣ, ಚಿನ್ನಾಭರಣ ದೋಚಿದ್ದಾರೆ. ಬಂದವರೆಲ್ಲ ಹಿಂದಿ ಮಾತನಾಡುತ್ತಿದ್ದರು ಎಂದು ಬ್ಯಾಂಕ್​ ಸಿಬ್ಬಂದಿ ರಾಮಚಂದ್ರ ತಿಳಿಸಿದ್ದಾರೆ.
ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ವಿಚಾರ ತಿಳಿದು ಕ್ಷೇತ್ರದ ಶಾಸಕ ಯು.ಟಿ. ಖಾದರ್‌ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಸಿಎಂ ಸಿದ್ದರಾಮಯ್ಯ ಮಂಗಳೂರು ಪ್ರವಾಸದ ದಿನವೇ ಈ ಘಟನೆ ನಡೆದಿರೋದು ಕರಾವಳಿ ಜನರನ್ನ ಬೆಚ್ಚಿಬೀಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!