Tuesday, February 10, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು ಜಿಲ್ಲೆಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುವುದೇ ಹಸಿರು ಫೌಂಡೇಶನ್ ಸಂಸ್ಥೆಯ ಗುರಿ : ರತನ್ ಊರುಬಗೆ

ಚಿಕ್ಕಮಗಳೂರು ಜಿಲ್ಲೆಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುವುದೇ ಹಸಿರು ಫೌಂಡೇಶನ್ ಸಂಸ್ಥೆಯ ಗುರಿ : ರತನ್ ಊರುಬಗೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿಯ ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲಿಗೆ ಗ್ರಾಮದ ಮೈದಾಡಿ ಪ್ರವಾಸಿ ತಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಪರಿಸರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು..

ಕಾರ್ಯಕ್ರಮದಲ್ಲಿ ಮೂಡಿಗೆರೆಯ ಕೈಗಾರಿಕಾ ತರಬೇತಿ ಕೇಂದ್ರದ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರಮದಾನ ಮಾಡಿದರು..

ಮೈದಾನದ ಸುತ್ತ ಮುತ್ತಲಿನ ಹಚ್ಚ ಹಸಿರಿನ ಪ್ರದೇಶದಲ್ಲಿ ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

ಪರಿಸರ ಕಾಳಜಿ ನಮ್ಮೆಲ್ಲರ ಕರ್ತವ್ಯ ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮುಂದಿನ ಪೀಳಿಗೆಗೆ ಒಳ್ಳೆ ಗಾಳಿ ನೀರು ಸಿಗಲು ಸಾಧ್ಯ. ಹಾಗೆ ಜಿಲ್ಲೆಯನ್ನು ಮತ್ತಷ್ಟು ಹಸಿರಿಂದ ಕಂಗೊಳಿಸುವಂತೆ ಮಾಡುವುದು ಸಂಸ್ಥೆಯ ಗುರಿ ಎಂದು ಹಸಿರು ಫೌಂಡೇಶನ್ ಸಂಸ್ಥಾಪಕ ರತನ್ ದೇವ್ ಊರುಬಗೆ ತಿಳಿಸಿದರು.

ಸ್ವಚ್ಛ ಕಾರ್ಯಕ್ಕೆ ಸ್ಥಳೀಯರು ಸಹಕಾರ ಶ್ಲಾಘನೀಯ ಗ್ರಾಮಸ್ಥರಿಗೆ ಧನ್ಯವಾದ ಅರ್ಪಿಸಿದರು

ಕಾರ್ಯಕ್ರಮದಲ್ಲಿ ಹಸಿರು ಫೌಂಡೇಶನ್ ಉಪಾಧ್ಯಕ್ಷರಾದ ವಿನುಪ್ರಸಾದ್, ಸಚಿನ್ ದುರ್ಗದಹಳ್ಳಿ, ಸಚಿನ್ ಸುಂಕಸಾಲೆ ಹಾಗೂ ಸ್ಥಳೀಯರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!