ಉಡುಪಿ: ಲೇಡಿ ಕಂಡಕ್ಟರ್ ಒಬ್ಬರು ಮತ್ತೋರ್ವ ಬಸ್ ಕಂಡಕ್ಟರ್‌ಗೆ ಕಪಾಳಮೋಕ್ಷ ಮಾಡಿದ ಘಟನೆ ಉಡುಪಿಯ ಸಂತೆಕಟ್ಟೆ ಬಳಿ ನಡೆದಿದೆ. ಸದ್ಯ ಲೇಡಿ ಕಂಡಕ್ಟರ್‌ನ ದಾದಾಗಿರಿಯ ವಿಡಿಯೋ ವೈರಲ್ ಆಗ್ತಿದೆ. ಖಾಸಗಿ ಬಸ್‌ಗಳ ಟೈಮಿಂಗ್ ವಿಚಾರಕ್ಕೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ.
ರೇಖಾ ಎಂಬ ಬಸ್ ಕಂಡಕ್ಟರ್ ತಮಗಿಂತ ಮೊದಲೇ ಮತ್ತೊಂದು ಬಸ್ ನಿಲ್ಲಿಸಿದ್ದಕ್ಕೆ ಆ ಕಂಡಕ್ಟರ್‌ನ ತರಾಟೆಗೆ ತೆಗೆದುಕೊಂಡಿದ್ದಾಳೆ. ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿ ಒಂದು ಹಂತದಲ್ಲಿ ಚಪ್ಪಲಿಯನ್ನೂ ಕೈಗೆತ್ತಿಕೊಂಡಿದ್ದಾಳೆ. ಕೊನೆಗೆ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನಂತರ ಲೇಡಿ ಕಂಡಕ್ಟರ್ ಬಸ್‌ನಿಂದ ಕೆಳಗಿಳಿದು ಬಂದಿದ್ದಾಳೆ. ಈಕೆಯ ರೌದ್ರಾವತಾರ ಕಂಡು ಪ್ರಯಾಣಿಕರು ತಬ್ಬಿಬ್ಬಾದ್ರು. ಸದ್ಯ ಈ ಘಟನೆಯ ಸಿಸಿಟಿವಿ ಫೂಟೇಜ್ ಎಲ್ಲೆಡೆ ವೈರಲ್ ಆಗ್ತಿದೆ.