Monday, March 30, 2026
Homebig breakingಸಭೆಗೆ ಬಾರದ ಅಧಿಕಾರಿಗಳು - ರೊಚ್ಚಿಗೆದ್ದು ಹೆದ್ದಾರಿ ತಡೆದು ಪ್ರತಿಭಟಿಸಿದ ಗ್ರಾಮಸ್ಥರು..!

ಸಭೆಗೆ ಬಾರದ ಅಧಿಕಾರಿಗಳು – ರೊಚ್ಚಿಗೆದ್ದು ಹೆದ್ದಾರಿ ತಡೆದು ಪ್ರತಿಭಟಿಸಿದ ಗ್ರಾಮಸ್ಥರು..!

ಕೊಪ್ಪ : ಒತ್ತುವರಿ ತೆರವು ವಿರೋಧಿಸಿ ಮಲೆನಾಡಿನ ವಿವಿಧೆಡೆ ಜನಾಂದೋಲನ, ಪ್ರತಿಭಟನೆ ನಡೆಯುತ್ತಿದೆ. ಈ ವಿಚಾರವಾಗಿ ಕರೆಯಲಾಗಿದ್ದ ಸಭೆಗೆ ಅಧಿಕಾರಿಗಳು ಬರಲಿಲ್ಲ ಎಂದು ಆಕ್ರೋಶಿತರಾದ ಹೇರೂರು ಗ್ರಾಮಸ್ಥರು ಶುಕ್ರವಾರ ದಿಢೀರ್‌ ಆಗಿ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.
ಕಸ್ತೂರಿ ರಂಗನವ್‌ ವರದಿ ಹಾಗೂ ಅರಣ್ಯ ಒತ್ತುವರಿ ತೆರವು ಸಂಬಂಧ ಚರ್ಚಿಸಲು ಗ್ರಾಮಸಭೆ ಕರೆಯಲಾಗಿತ್ತು. ಸಭೆಗೆ ತಾಲೂಕು ತಹಸೀಲ್ದಾರ್‌, ಕಂದಾಯಾಧಿಕಾರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಇಬ್ಬರು ಕೂಡಾ ಸಭೆಗೆ ಬಾರದ ಕಾರಣಕ್ಕೆ ಗ್ರಾಮಸ್ಥರು ರೊಚ್ಚಿಗೆದ್ದರು. ನಮ್ಮ ಸಮಸ್ಯೆ ಆಲಿಸದಿದ್ರೆ ದೊಡ್ಡ ಮಟ್ಟದ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ಕೊಟ್ರು. ಕುಕ್ಕುಡಿಗೆ ರವೀಂದ್ರ, ಅರೆನೂರು ಸಂತೋಷ್, ತಿಮ್ಮಪ್ಪ ಹೆಗ್ಗಡೆ ಸೇರಿದಂತೆ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ದಿಢೀರ್ ಪ್ರತಿಭಟನೆಯಿಂದಾಗಿ ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!