ಚಿಕ್ಕಮಗಳೂರು: ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಕಪ್ಪ ಕಾಣಿಕೆ ಪಡೆದಿದ್ದಾರೆ ಎಂದು ಬಿಜೆಪಿ ಕೊಂಡಿರುವ ನಗರಸಭೆ ಸದಸ್ಯ ವರಸಿದ್ಧಿ ವೇಣುಗೋಪಾಲ್ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ನಗರಸಭೆ ಮಾಜಿ ಮಾಜಿ ಅಧ್ಯಕ್ಷೆ ಶ್ರೀಮತಿ ಸುಜಾತಾ ಶಿವಕುಮಾರ್ ಅವರು ಕಿಡಿಕಾರಿದರು.

ಪಕ್ಷದ ಸಿದ್ಧಾಂತ ಉಲ್ಲಂಘನೆ ಮತ್ತು ಅಶಿಸ್ತಿನಿಂದ ನಡೆದುಕೊಂಡಿದ್ದರಿಂದ ವೇಣುಗೋಪಾಲ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಪಕ್ಷದ ಮುಖಂಡರು ಹಾಗೂ ಪಕ್ಷಕ್ಕೆ ಕೆಟ್ಟ ಹೆಸರು ಬರುವ ಉದ್ದೇಶದಿಂದ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಅವರ ವಿರುದ್ದವೇ ಆರೋಪ ಮಾಡಿದರು.
ನಾನು ಅಧ್ಯಕ್ಷರಾಗುವ ಸಂದರ್ಭದಲ್ಲಿ ಯಾವುದೇ ಕಪ್ಪ ಕಾಣಿಕೆಯನ್ನು ಯಾರಿಗೂ ನೀಡಿಲ್ಲ ನಮ್ಮ ನಾಯಕರದ ಮಾಜಿ ಸಚಿವರಾದ ಸಿ ಟಿ ರವಿ ಅವರು ಪಕ್ಷದ ಜಿಲ್ಲಾ ಅಧ್ಯಕ್ಷರಾದ ಎಂ.ಆರ್. ದೇವರಾಜ್ ಶೆಟ್ಟಿಯವರು ಹಾಗೂ ತಂಡದವರು ಹಿಂದುಳಿದ ವರ್ಗಕ್ಕೆ ಸೇರಿರುವ ನನ್ನನ್ನು ನಗರಸಭೆ ಅಧ್ಯಕ್ಷಳನ್ನಾಗಿ ಮಾಡಿದ್ದರು ನಾನು ಅಧ್ಯಕ್ಷಳಾಗಲು ಯಾವುದೇ ಹಣವನ್ನು ಖರ್ಚು ಮಾಡಿಲ್ಲ
ನನ್ನ ಮತ್ತು ಪಕ್ಷದ ಮುಖಂಡರ ಹೆಸರನ್ನು ಎಳೆದು ತಂದಿರುವ ವೇಣುಗೋಪಾಲ್ ಅವರು ಪಕ್ಷದಿಂದ ನಗರಸಭೆ ಅಧ್ಯಕ್ಷರಾಗಿದ್ದರು. ಆಗ ಅವರು ಯಾರ್ಯಾರಿಗೆ ಎಷ್ಟೆಷ್ಟು ಕಪ್ಪ ಕಾಣಿಕೆ ನೀಡಿದ್ದರು ಎಂಬುದನ್ನು ಸ್ಪಷ್ಟಪಡಿಸಲಿ ಎಂದರು
ಹಾಗೆ ವಿಪ್ ಜಾರಿಗೆ ಸಂಬಂಧಿಸಿದಂತೆ ನಗರ ಮಂಡಲ ಅಧ್ಯಕ್ಷ ಕೆ ಎಸ್ ಪುಷ್ರಾಜ್ ಅವರ ವಿರುದ್ಧ ದ್ವೇಷದಿಂದ ಹೇಳಿಕೆ ನೀಡಿದ್ದಾರೆ ನಾಲಿಗೆ ಇದೆ ಎಂದು ಕಪೋ ಕಲ್ಪಿತ ಹೇಳಿಕೆ ನೀಡಿರುವುದನ್ನು ನಿಲ್ಲಿಸಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಶ್ರೀಮತಿ ಸುಜಾತಾ ಶಿವಕುಮಾರ್ ಅವರು ವರಸಿದ್ಧಿ ವೇಣುಗೋಪಾಲ್ ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಚಿಕ್ಕಮಗಳೂರು ಜಿಲ್ಲೆಯ ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಶೀಲಾ ದಿನೇಶ್ ಅವಿರೋಧವಾಗಿ ಆಯ್ಕೆಯಾದರು. ಆದರೆ ಸುಜಾತ ಶಿವಕುಮಾರ್ ಅವರು ಈ ಹಿಂದೆ ಅಧ್ಯಕ್ಷರಾಗುವ ಸಂದರ್ಭದಲ್ಲಿ ಕಪ್ಪ ಕಾಣಿಕೆ ನೀಡಿದ್ದಾರೆ ಎಂದ ವರಸಿದ್ಧಿ ವೇಣುಗೋಪಾಲ್ ಅವರು ಆರೋಪ ಮಾಡಿದ್ದರು.