ಜಯಪುರ: ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಪಿಎಮ್ ವಿಶ್ವಕರ್ಮ ಕಾರ್ಯಕ್ರಮದ ಮೂಲಕ ಬಡ ಜನರು ತಮ್ಮ ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಇದು ತಮ್ಮ ಕೈಗಳು ಮತ್ತು ಉಪಕರಣಗಳಿಂದ ಕೆಲಸ ಮಾಡುವ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳಿಗೆ ಸಂಪೂರ್ಣ ಬೆಂಬಲವನ್ನು ಒದಗಿಸುತ್ತದೆ. ಸಾಂಪ್ರದಾಯಿಕ ಕರಕುಶಲ ವಸ್ತುಗಳಲ್ಲಿ ತೊಡಗಿರುವ ಜನರನ್ನು ಬೆಂಬಲಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಸ್ಥಳೀಯ ಉತ್ಪನ್ನಗಳು, ಕಲೆ ಮತ್ತು ಕರಕುಶಲ ವಸ್ತುಗಳ ಮೂಲಕ ಪ್ರಾಚೀನ ಸಂಪ್ರದಾಯಗಳು ಮತ್ತು ವೈವಿಧ್ಯಮಯ ಪರಂಪರೆಯನ್ನು ಜೀವಂತವಾಗಿಡುವುದರ ಜೊತೆಗೆ ಕುಶಲಕರ್ಮಿಗಳನ್ನು ಆರ್ಥಿಕವಾಗಿ ಬೆಂಬಲಿಸುವ ಬಯಕೆಯಿಂದ ಈ ಉದ್ದೇಶವನ್ನು ನಡೆಸಲಾಗುತ್ತಿದೆ ಎಂದು ದಿಶಾ ಸಮಿತಿ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿ ತಿಳಿಸಿದರು.

ಜಯಪುರದ ಅಂಚೆ ಕಚೇರಿಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಜನೆಯು 18 ವೃತ್ತಿಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳನ್ನು ಒಳಗೊಂಡಿದೆ.ದೇಶದಲ್ಲೇ ನಮ್ಮ ಚಿಕ್ಕಮಗಳೂರು ಜಿಲ್ಲೆ ನಮ್ಮ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರ ಬಯಕೆಯಂತೆ ವಿಶ್ವಕರ್ಮ ಯೋಜನೆಯ ಜಾರಿ ನಂಬರ್ ಒನ್ ರಲ್ಲಿ ಇದೆ. 50 ಸಾವಿರಕ್ಕೂ ಅಧಿಕ ಅರ್ಜಿಗಳು ನಮ್ಮ ಜಿಲ್ಲೆಯಿಂದ ಬಂದಿದ್ದು 7 ಸಾವಿರಕ್ಕೂ ಅರ್ಹ ಅಧಿಕ ಫಫಲಾನುಭವಿಗಳಿಗೆ ಯೋಜನೆಯು ತಲುಪಿದೆ ಜೊತೆಗೆ ಕೇಂದ್ರ ಎಲ್ಲಾ ಜನಪರ ಯೋಜನೆಗಳನ್ನು ಜನತೆ ಬಳಸಿಕೊಳ್ಳಬೇಕು ಎಂದು ಜಯಪುರ ಅಂಚೆ ಇಲಾಖೆ ಹಾಗೂ ವಿಶ್ವಕರ್ಮ ಯೋಜನೆಯ ಸಂಯೋಜಕರಿಂದ ಅರ್ಹ ಫಲಾನುಭವಿಗಳಿಗೆ ವಿಶ್ವಕರ್ಮ ಕಿಟ್ ಅನ್ನು ವಿತರಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಜಿಲ್ಲಾ ದಿಶಾ ಸಮಿತಿ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿ ಹೇಳಿದರು .
ವಿಶ್ವಕರ್ಮ ಜಿಲ್ಲಾ ಸಮಿತಿ ಸದಸ್ಯರಾದ ವೆನ್ನಿಲ್ಲಾ ಭಾಸ್ಕರ್ ಕಿಟ್ ವಿತರಿಸಿ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯನ್ನು ಪ್ರತಿ ದೇಶವಾಸಿಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಅದಕ್ಕೆ ಪೂರಕವಾಗಿ ಯೋಜನೆಯವರು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಪ್ರಯತ್ನ ಮಾಡಬೇಕು ಎಂದರು .

ಯೋಜನೆಯ ಸಂಯೋಜಕಿ ಸಂಧ್ಯಾ ಮಾತನಾಡಿ ಕೇಂದ್ರ ವಲಯದ ಯೋಜನೆಯಾದ ಪಿಎಂ ವಿಶ್ವಕರ್ಮವನ್ನು ಸೆಪ್ಟೆಂಬರ್ 17, 2023 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು ಈಗಾಗಲೇ ಅನೇಕ ಫಲಾನುಭವಿಗಳಿಗೆ ಕಿಟ್ ವಿತರಣೆ ಆಗಿದೆ ಇನ್ನೂ ಅನೇಕ ಅರ್ಜಿದಾರರಿಗೆ ಯೋಜನೆಯನ್ನು ತಲುಪುವ ಕಾರ್ಯಕ್ರಮಗಳಿದ್ದು ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಯಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಕರುಣಾಕರ , ಉಪಾಧ್ಯಕ್ಷೆ ಜಯ ಮುರುಗೇಶ್ , ಬಿಜೆಪಿ ರೈತ ಮೋರ್ಚಾ ತಾಲ್ಲೂಕು ಅಧ್ಯಕ್ಷ ಸಂತೋಷ್ ಅರನೂರ್ , ಮೇಗುಂದಾ ಹೋಬಳಿ ಅಧ್ಯಕ್ಷ ಕಾರ್ತಿಕ್ ಕಾರಂತ್ , ಯುವಮೋರ್ಚಾ ತಾ ಪ್ರಧಾನ ಕಾರ್ಯದರ್ಶಿ ಶ್ರೇಯಸ್ , ಜಯಪುರ ಕರಾಟೆ ಅಸೋಸಿಯೇಷನ್ ನ ಕಾರ್ಯದರ್ಶಿ ಮಣಿಕಂಠ ಆರ್ , ಪತ್ರಕರ್ತ ಸಂಘದ ಜಿಲ್ಲಾ ಕಾರ್ಯದರ್ಶಿ ಕಿಬ್ಳಿ ಪ್ರಸನ್ನ , ಅಂಚೆ ಕಚೇರಿಯ ಅರುಣ್ ಕುಮಾರ್ , ಅಂಚೆ ಸಿಬ್ಬಂದಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
ವರದಿ: ಶಶಿ ಬೆತ್ತದಕೊಳಲು
