ಶೃಂಗೇರಿ: ಮಲೆನಾಡಲ್ಲಿ ಭಾರಿ ಗಾಳಿ ಮಳೆಯಾಗುತ್ತಿದ್ದು, ಕಣತಿ ಗ್ರಾಮದ ಬಳಿಯ ಚಿಕ್ಕಮಗಳೂರು – ಶೃಂಗೇರಿ ಹೈವೆಯಲ್ಲಿ ಬೃಹತ್ ಮರ ಧರೆಗುರುಳಿದೆ

ಮರ ಧರೆಗುರುಳಿದ ಪರಿಣಾಮ ಗಂಟೆಗಟ್ಟಲೇ ಸುಮಾರು 4-5 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಳೆ ಮಧ್ಯೆ ನಿಂತಲ್ಲೇ ನಿಂತ ವಾಹನಗಳಿಂದ ವಾಹನ ಸವಾರರು ಪರದಾಡಿದ್ದಾರೆ.
ಚಿಕ್ಕಮಗಳೂರು ನಗರದಲ್ಲೂ ಮಳೆ ಅಬ್ಬರಿಸಿದೆ. ಇದರಿಂದ ವಾಹನ ಸವಾರರು ಪರದಾಡಿದ್ದಾರೆ. ಇನ್ನೂ ಎರಡು ದಿನ ನಗರದ ಸುತ್ತಮುತ್ತ ಮಳೆಯಾಗುವ ಸಾಧ್ಯತೆ ಇದೆ.

ವರದಿ: ಶಾಲಿನಿ ಪಿ.ಗೌಡ
