ಹಾಸನ: ಕಾಫಿ ತೋಟದಲ್ಲಿ ಮರಗಸಿ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಆಲೂರು ತಾಲೂಕಿನ ಹಾರೋಹಳ್ಳಿಯಲ್ಲಿ ನಡೆದಿದ್ದು, ಕಾರ್ಮಿಕ ಶಾಂತರಾಜು ಮೃತಪಟ್ಟ ವ್ಯಕ್ತಿಯಾಗಿದ್ದು ಆಲೂರು ತಾಲೂಕಿನ ಹೆಮ್ಮಿಗೆ ಗ್ರಾಮದ ಕಾಫಿ ತೋಟದಲ್ಲಿ ಮರ ಕತ್ತರಿಸುವ ವೇಳೆ ನಡೆದ ಅವಘಡ ಆಗಿದೆ.

ಮಳೆ ಬಂದು ಮರಗಳಲ್ಲಿ ಪಾಚಿ ಕಟ್ಟಿದ್ದರಿಂದ ಮರಗಳು ಜಾರುತ್ತಿದ್ದು ಹೊಟ್ಟೆ ಪಾಡಿಗೆ ಮರ ಹತ್ತಿದ ಬಡಪಾಯಿ ಹಾಗೆ ಇಂದು ಸಿಗುವ ಸಂಬಳದಲ್ಲಿ ಮನೆ ಮಕ್ಕಳಿಗೆ ಮಡದಿಗೆ ಏನಾದ್ರು ತರೋಣ ಅನ್ಕೊಂಡು ಮರ ಹತ್ತಿದ್ದಾನೆ ಆದರೆ ಅವನ ದುರಾದೃಷ್ಟವಶಾತ್ ಮರದಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.