ಚಿಕ್ಕಮಗಳೂರು: ಜಿಲ್ಲಾ ಅಹಿಂದಾ ಅಧ್ಯಕ್ಷರಾಗಿ ತ್ರಿಭುವನ್ ಎತ್ತಿನಮನೆ ಅವರು ಆಯ್ಕೆಯಾದರು.ನಗರದ ಪ್ರವಾಸಿ ಮಂದಿರದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಈ ವೇಳೆ ಶಾಸಕರಾದ ಎಚ್.ಡಿ. ತಮ್ಮಯ್ಯ ಅವರು ಅವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಡಿ ತಮ್ಮಯ್ಯ ಅವರು ಮಾತನಾಡಿ, ರಾಜ್ಯದಲ್ಲಿ ಎರಡು ಬಾರಿ ದಾಖಲೆಯ ಮುಖ್ಯಮಂತ್ರಿಗಳು ಆಗಿರುವ ಸಿದ್ದರಾಮಯ್ಯನವರು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಎಲ್ಲಾ ವರ್ಗದ ಬಡವರ ಬದುಕನ್ನು ಹಸನಗೊಳಿಸಿದ್ದಾರೆ ಹಾಗೆ ಅವರೂ ಕೂಡ ಅಹಿಂದಾ ನಾಯಕರ ಪರವಾಗಿ ಧ್ವನಿ ಎತ್ತಿದವರು ನೀವೂ ಹಾಗೆ ಇರಬೇಕು ಎಂದು ನುಡಿದರು.
ಹಾಗೆ ಮಾಜಿ ಸಚಿವ ಬಿಬಿ ನಿಂಗಯ್ಯನವರು ಮಾತನಾಡಿ, ಜಿಲ್ಲಾ ಅಹಿಂದಾ ಅಧ್ಯಕ್ಷರಾಗಿರೋದು ಎಲ್ಲರಿಗೂ ಸಂತೋಷವಾಗಿದೆ ಡಾಕ್ಟರ್ ಬಿ.ಆರ್ ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ, ದಾಸ ಶ್ರೇಷ್ಠ ಕನಕದಾಸರು, ಕುವೆಂಪುರವರು ಶೋಷಿತ ಪರವಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹನೀಯರಾಗಿದ್ದಾರೆ ಅವರ ಪಟ್ಟಿಗೆ ನೀವೂ ಸೇರಿ ಎಂದು ಹೇಳಿದರು
ಆ ನಂತರ ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಕೂಡ ಮಾತನಾಡಿ ಸಿಎಂ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ನೀವೂ ಕೂಡ ಆಯ್ಕೆ ಆಗಿದ್ದೀರಾ ಹಾಗಾಗಿ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ರೂಪಿಸಲು ಮುಂದಾಗಬೇಕು ಎಂದು ಹೇಳಿದರು. ಅದೇ ರೀತಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅಹಿಂದಾ ಸಂಘಟನೆಗಳನ್ನು ಸ್ಥಾಪನೆ ಮಾಡಿ ಹಿರಿಯರ ಮಾರ್ಗದರ್ಶನ ಪಡೆದು ಮುಂದುವರೆಯಿರಿ ಎಂದು ಸಲಹೆ ಕೂಡ ನೀಡಿದರು
ಅದಾದ ನಂತರ ನೂತನ ಅಧ್ಯಕ್ಷ ತ್ರಿಭುವನ್ ಅವರು ಮಾತನಾಡಿ ಅಹಿಂದಾ ಸಂಘಟನೆಯಲ್ಲಿ ಅವಕಾಶ ಮಾಡಿಕೊಟ್ಟ ಎಲ್ಲ ನನ್ನ ಹಿರಿಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಹಾಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಹಿಂದಾ ಸಂಘಟನೆ ಗಟ್ಟಿಗೊಳಿಸಲು ಶ್ರಮಿಸುವುದಾಗಿ ಎಲ್ಲರಿಗೂ ನಾನು ಭರವಸೆ ನೀಡುತ್ತೇನೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಎ.ಎನ್. ಮಹೇಶ್, ರೇಖಾ ಹುಲಿಯಪ್ಪಾ ಗೌಡ, ನಯಾಜ್ ಅಹಮದ್ ಹಾಗೆ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು
